ಶ್ರೀಮಂಗಲ, ಡಿ. 22: ರಾಜ್ಯ ಸರ್ಕಾರ ರೈತರನ್ನು ಸಾಲದಿಂದ ಮುಕ್ತಗೊಳಿಸಲು ಸಾಲ ಮನ್ನಾ ಯೋಜನೆ ಜಾರಿಗೆ ತಂದಿದೆ. ಆದರೆ ಬ್ಯಾಂಕಿನಲ್ಲಿ ಬೆಳೆಸಾಲ ಇದ್ದರೂ, ಕೆಲವು ಬ್ಯಾಂಕ್‍ಗಳಿಂದ ಅರ್ಹ ಫಲಾನುಭವಿ ರೈತರ ಬೆಳೆ ಸಾಲವನ್ನು ಸಾಲ ಮನ್ನಾ ಯೋಜನೆಯಡಿ ಸೇರಿಸದೇ ಇರುವದರಿಂದ ರೈತರು ಈ ಯೋಜನೆಯ ಸೌಲಭ್ಯದಿಂದ ವಂಚಿತರಾಗುವಂತೆ ಆಗಿದೆ. ಕೂಡಲೇ ಜಿಲ್ಲಾಮಟ್ಟದ ಬ್ಯಾಂಕ್‍ಗಳ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರು ತುರ್ತಾಗಿ ಈ ಬಗ್ಗೆ ಸ್ಪಂದಿಸಿ, ಅರ್ಹ ರೈತರಿಗೆ ಈ ಸೌಲಭ್ಯ ದೊರಕಿಸಿಕೊಡಲು ಮುಂದಾಗಬೇಕೆಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ ಒತ್ತಾಯಿಸಿದ್ದಾರೆ.
ಬಿರುನಾಣಿ ಗ್ರಾ.ಪಂ. ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿ ರೈತರು ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಗತ್ಯವಾದರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಬಿ.ಕೆÀ. ನಾಣಯ್ಯ, ಬಿರುನಾಣಿ ಕೆನರಾ ಬ್ಯಾಂಕ್ ಶಾಖೆಯಲ್ಲಿÀ ನೂರಾರು ರೈತರು ತೋಟ ಹಾಗೂ ಗದ್ದೆಯ ಆರ್.ಟಿ.ಸಿ.ಯನ್ನು ಆಧಾರವಾಗಿ ನೀಡಿ ಬೆಳೆ ಸಾಲ ಪಡೆÉದಿದ್ದಾರೆ. ಅಂತಹ ಸಾಲಗಳು ಎನ್.ಪಿ.ಎ. ಆಗಿವೆ. ಸಾಲ ಮನ್ನಾ ಯೋಜನೆಯಡಿ ಸೌಲಭ್ಯ ಪಡೆಯಲು ಬ್ಯಾಂಕ್‍ನವರು ಸಲ್ಲಿಸಿದ ಪಟ್ಟಿಯಲ್ಲಿ ಇಂತಹ ರೈತರ ಹೆಸರನ್ನು ಕೈಬಿಡಲಾಗಿದೆ. ಇದು ಸರಿಯಲ್ಲ ಎಂದು ಹೇಳಿದರು.
ಬ್ಯಾಂಕ್‍ನಲ್ಲಿ ರೈತರು ಹೊಂದಿರುವ ಬೆಳೆ ಸಾಲವನ್ನು ರೈತರ ಪರವಾಗಿ ರಾಜ್ಯ ಸರಕಾರ ಪಾವತಿಸಲು ತಯಾರಾಗಿ ಯೋಜನೆ ಜಾರಿ ಮಾಡಿದೆ. ಆದರೆ ಬ್ಯಾಂಕ್‍ನವರೇ ರೈತರು ಹೊಂದಿರುವ ಸಾಲದ ಮಾಹಿತಿಯನ್ನು ಫಲಾನುಭವಿ ಪಟ್ಟಿಯಲ್ಲಿ ಸೇರಿಸದೇ ಇರುವದರಿಂದ ನೂರಾರು ರೈತರು ಈ ಯೋಜನೆಯಿಂದ ವಂಚಿತ ರಾಗುವಂತೆ ಆಗಿದೆ. ರೈತರ ಪರವಾಗಿ ಸರ್ಕಾರ ರೈತರ ಸಾಲ ಕಟ್ಟಲು ಮುಂದಾಗಿದ್ದರೂ, ಅದರ ಮಾಹಿತಿ ನೀಡದೆ ಬ್ಯಾಂಕ್ ಸಾಲ ಹೊಂದಿಕೊಳ್ಳಲು ಮುಂದಾಗಿಲ್ಲ. ಇನ್ನೊಂದು ಕಡೆ ಅಂತಹ ಸಾಲವನ್ನು ಸಂಕಷ್ಟದಲ್ಲಿರುವ ರೈತ ಕಟ್ಟಲು ಸಾಧ್ಯವಾಗದೆ ಇರುವ ಪರಿಸ್ಥಿತಿಯಲ್ಲಿ ಇರುವದರಿಂದ ಅಂತಹ ಸಾಲ ರೈತನ ಹೆಸರಿನಲ್ಲಿಯೇ ಉಳಿದುಕೊಂಡು ರೈತ ಸಾಲಗಾರನಾಗಿಯೇ ಇರುವಂತೆÉ ಬ್ಯಾಂಕ್‍ನ ನಿಯಮದಿಂದ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ರೈತರು ಬ್ಯಾಂಕ್ ವ್ಯವಸ್ಥಾಪಕರನ್ನು ವಿಚಾರಿಸಿದಾಗ “ರಿಟರ್ನ್ ಆಫ್” ಸಾಲಗಳು ಬಾಕಿ ಇರುವ ಸಾಲ ಅಗೋಚರವಾಗಿರುವದರಿಂದ (ಔಟ್ ಸ್ಟ್ಯಾಂಡಿಂಗ್) ಸಾಲ ಮನ್ನಾ ಸೌಲಭ್ಯದ ಪಟ್ಟಿಗೆ ಸೇರಿಸಿಲ್ಲ. “ರಿಟರ್ನ್ ಆಫ್” ಸಾಲಗಳು ಬೆಳೆ ಸಾಲವಾಗಿದ್ದು, ಅವುಗಳನ್ನು ಬ್ಯಾಂಕ್ ಪಾವತಿಸುವಂತೆ ಕೇಳುವದಿಲ್ಲ. ಆದರೆ ಬೇರೆ ಬ್ಯಾಂಕ್‍ನಲ್ಲಿ ಸಾಲ ಪಡೆಯಬೇಕಾದ ಸಂದರ್ಭ ಸಾಲ ದೊರೆಯುವದಿಲ್ಲ ಹಾಗೂ ತಮ್ಮ ಶಾಖೆಯಿಂದ ನಿರಾಪೇಕ್ಷಣಾ ಪತ್ರವೂ ದೊರೆಯುವದಿಲ್ಲ. ಈ “ರಿಟರ್ನ್ ಆಫ್” ಸಾಲವನ್ನು ಸಂಬಂಧಿಸಿದ ರೈತ ಕಟ್ಟಬೇಕಾಗುತ್ತದೆ ಎಂದು ರೈತರಿಗೆ ಮಾಹಿತಿ ನೀಡಿದ್ದಾರೆ ಎಂದು ಬಿ.ಕೆ. ನಾಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಬೆಳೆಸಾಲ ಹೊಂದಿರುವ ರೈತರ ಸಾಲ ಮರುಪಾವತಿಗೆ ಬ್ಯಾಂಕ್‍ಗಳು ಮುಂದಾದರೆ ಹಾಗೂ ನಿರಾಪೇಕ್ಷಣ ಪತ್ರ ನೀಡುವ ಸಂದರ್ಭ, ಹೊಸ ಸಾಲ ಪಡೆಯುವ ಸಂದರ್ಭ ಬ್ಯಾಂಕ್‍ನಿಂದ ಏನಾದರೂ ಅಭ್ಯಂತರ ಉಂಟು ಮಾಡಿದರೆ ಅಂತಹ ಬ್ಯಾಂಕ್‍ಗಳ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಈ ಸಂದರ್ಭ ರೈತರಾದ ಅಣ್ಣೀರ ವಿಜು ಪೂಣಚ್ಚ, ಅರಂಗಿಪನೇರ ಪ್ರವೀಣ್, ಬಲ್ಯಮೀದೇರಿರ ರನ್ನು ಹಾಜರಿದ್ದರು.