ಸೋಮವಾರಪೇಟೆ, ಡಿ. 22: ನಾಲ್ಕು ನಾಡು ಅರಮನೆಯ ಬೀಡು, ಕಲೆ ಸಂಸ್ಕøತಿಗಳ ತವರು, ಜ್ಞಾನ ದೇಗುಲಗಳ ತಾಣ, ಕೊಡವ, ಮಲೆಯಾಳ, ಅರೆಭಾಷೆಯೇ ದೈನಂದಿನ ಜೀವನದಲ್ಲಿ ಹೆಚ್ಚು ಬಳಕೆಯಾಗುವ ಕೊಡಗಿನ ನಾಲ್ಕುನಾಡುವಿಗೆ ಸೇರಿದ ನಾಪೋಕ್ಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜನೆ ಗೊಂಡಿದ್ದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕರುನಾಡ ಶ್ರೀಮಂತ ಸಂಸ್ಕøತಿಯನ್ನು ಪಸರಿಸಿತು.4 ಕೋಟಿಗೂ ಅಧಿಕ ಮಂದಿ ಬಳಸಲ್ಪಡುವ, ಶಾಸ್ತ್ರೀಯ ಸ್ಥಾನಮಾನ ದೊಂದಿಗೆ ಹೆಚ್ಚು ಜ್ಞಾನಪೀಠಗಳನ್ನು ಪಡೆದಿರುವ, ಪ್ರಪಂಚದಲ್ಲಿಯೇ ಅತೀ ಹೆಚ್ಚು ಬಳಕೆಯಾಗುವ ಭಾಷೆಗಳ ಸಾಲಿನಲ್ಲಿ 27ನೇ ಸ್ಥಾನ ಪಡೆದಿರುವ, ಪಂಚ ದ್ರಾವಿಡ ಭಾಷೆಗಳಲ್ಲಿ ಗೊಂಡಿದ್ದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕರುನಾಡ ಶ್ರೀಮಂತ ಸಂಸ್ಕøತಿಯನ್ನು ಪಸರಿಸಿತು.

4 ಕೋಟಿಗೂ ಅಧಿಕ ಮಂದಿ ಬಳಸಲ್ಪಡುವ, ಶಾಸ್ತ್ರೀಯ ಸ್ಥಾನಮಾನ ದೊಂದಿಗೆ ಹೆಚ್ಚು ಜ್ಞಾನಪೀಠಗಳನ್ನು ಪಡೆದಿರುವ, ಪ್ರಪಂಚದಲ್ಲಿಯೇ ಅತೀ ಹೆಚ್ಚು ಬಳಕೆಯಾಗುವ ಭಾಷೆಗಳ ಸಾಲಿನಲ್ಲಿ 27ನೇ ಸ್ಥಾನ ಪಡೆದಿರುವ, ಪಂಚ ದ್ರಾವಿಡ ಭಾಷೆಗಳಲ್ಲಿ ಹಿರಿಯ ಸಾಹಿತಿ ಹಾಗೂ ಪತ್ರಕರ್ತರೂ ಆಗಿರುವ ಭಾರಧ್ವಾಜ್ ಕೆ. ಆನಂದತೀರ್ಥ ಅವರ ಸಮ್ಮೇಳನಾ ಧ್ಯಕ್ಷತೆಯಲ್ಲಿ ನಾಪೋಕ್ಲುವಿನಲ್ಲಿ ಚಾಲನೆ ಪಡೆದ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡಾಭಿಮಾನಿಗಳ ಹಬ್ಬದಂತೆ ಸಂಭ್ರಮಕ್ಕೆ ಕಾರಣವಾಯಿತು. ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಕನ್ನಡಾಭಿಮಾನಿಗಳು, ಕೊಡಗಿನ ವಿವಿಧೆಡೆಗಳಿಂದ ಆಗಮಿಸಿದ್ದ ಕನ್ನಡ ಪ್ರಿಯರು, ಕಸಾಪ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರ ಪಾಲ್ಗೊಳ್ಲುವಿಕೆಯೊಂದಿಗೆ ನಾಪೋಕ್ಲು ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಹಿಂದೊಮ್ಮೆ ತಾಲೂಕು ಕೇಂದ್ರ ವಾಗಿದ್ದ ನಾಪೋಕ್ಲು ಬದಲಾದ ಕಾಲಘಟ್ಟದಲ್ಲಿ ಹೋಬಳಿ ಕೇಂದ್ರವಾಗಿ ಮಡಿಕೇರಿ ತಾಲೂಕಿನೊಂದಿಗೆ ಸೇರ್ಪಡೆ ಗೊಂಡಿದ್ದು, ಸಾಂಸ್ಕøತಿಕ ವಾಗಿಯೂ ಶ್ರೀಮಂತಿಕೆಯನ್ನು ಹೊಂದಿದೆ. ಕೃಷಿ, ಸಾಹಿತ್ಯ, ಅಧ್ಯಯನ ದಲ್ಲಿಯೂ ಹೆಸರು ಗಳಿಸಿರುವ ನಾಪೋಕ್ಲಿನಲ್ಲಿ ಕಸಾಪ ಆಯೋಜಿಸಿದ ಕನ್ನಡ ಸಾಹಿತ್ಯ ಸಮ್ಮೇಳನ, ಸಾವಿರಾರು ಕನ್ನಡಾಭಿಮಾನಿಗಳ ಸಮ್ಮಿಳಿನದೊಂದಿಗೆ ಗಮನ ಸೆಳೆಯಿತು.