ಗೋಣಿಕೊಪ್ಪ ವರದಿ, ಡಿ. 21 : ಹಾಕಿ ಹುಬ್ಬಳ್ಳಿ ತಂಡವನ್ನು ಸೋಲಿಸಿರುವ ಹಾಕಿಕೂರ್ಗ್ ತಂಡ ಸೆಮಿ ಫೈನಲ್‍ಗೆ ಪ್ರವೇಶ ಪಡೆದಿದೆ.
ಮೈಸೂರು ಮಹಾರಾಜಾಸ್ ಕಾಲೇಜು ಮೈದಾನದಲ್ಲಿ ಹಾಕಿ ಮೈಸೂರು ವತಿಯಿಂದ ನಡೆಯುತ್ತಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ 2 ನೇ ಪಂದ್ಯದಲ್ಲಿ ಹಾಕಿ ಹುಬ್ಬಳ್ಳಿ ತಂಡವನ್ನು 7-1 ಗೋಲುಗಳ ಮೂಲಕ ಮಣಿಸಿತು. 20 ಹಾಗೂ 44 ನೇ ನಿಮಿಷದಲ್ಲಿ ಶಮಂತ್, 25 ಹಾಗೂ 46 ರಲ್ಲಿ ಕಾರ್ಯಪ್ಪ, 16 ನೇ ನಿಮಿಷದಲ್ಲಿ ಪೊನ್ನಣ್ಣ, 32 ರಲ್ಲಿ ಮಣಿ, 47 ರಲ್ಲಿ ಚಿಟ್ಯಪ್ಪ ಗೋಲು ಹೊಡೆದರು. ಟೂರ್ನಿಯ 2 ಪಂದ್ಯಗಳನ್ನು ಗೆದ್ದಿರುವ ಹಾಕಿಕೂರ್ಗ್ ಸೆಮಿಗೆ ಪ್ರÀವೇಶ ಪಡೆದುಕೊಂಡಿದ್ದು, ತಾ. 22ರಂದು (ಇಂದು) ಸೆಮಿ ಫೈನಲ್ ಆಡಲಿದೆ.
- ಸುದ್ದಿಪುತ್ರ