ಸಿದ್ದಾಪುರ, ಡಿ. 21: ತಾ. 29 ರಂದು ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಫಿನಿಕ್ಸ್ ಕಪ್ 2018 ವಾಲಿಬಾಲ್ ಪಂದ್ಯಾಟ ನಡೆಯಲಿದೆ.

ನೆಲ್ಯಹುದಿಕೇರಿಯ ವಿಘ್ನೇಶ್ವರ ಮಿತ್ರಮಂಡಳಿ ಬೆಟ್ಟದಕಾಡು ಹಾಗೂ ರಿವರ್ ಬಾಯ್ಸ್ ಯುವಕ ಸಂಘ ಬೆಟ್ಟದಕಾಡು ಇವರಗಳ ವತಿಯಿಂದ ಬೆಟ್ಟದಕಾಡುವಿನ ಮೈದಾನದಲ್ಲಿ ಮೊದಲನೆ ವರ್ಷದ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ವಿಜೇತ ತಂಡಗಳಿಗೆ ಪ್ರಥಮ ರೂ.8888, ದ್ವಿತೀಯ

ರೂ. 5555 ಹಾಗೂ ಆಕರ್ಷಕ ಟ್ರೋಫಿ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ಇತರ ಬಹುಮಾನಗಳಾಗಿ ಉತ್ತಮ ಹೊಡೆತಗಾರ ಪಾಸರ್, ಆಲ್ ರೌಂಡರ್ ಮತ್ತು ಡಿಫೆಂಡರ್ ಟ್ರೋಫಿ ನೀಡಲಾಗುವದು. ಭಾಗವಹಿಸುವ ತಂಡಗಳು ಮೊ: 9880840189, 9108001701 ಸಂಪರ್ಕಿಸಲು ಕೋರಿದ್ದಾರೆ.