ಸೋಮವಾರಪೇಟೆ, ಡಿ. 21: ನೂತನವಾಗಿ ರಚಿಸಲಾಗಿರುವ ಪ್ರಕೃತಿ ಕವಿ ಬಳಗದ ಉದ್ಘಾಟನೆ ತಾ. 30 ರಂದು ಪೂರ್ವಾಹ್ನ 10.30ಕ್ಕೆ ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಬಳಗದ ಮುಖ್ಯಸ್ಥೆ ರಾಧಿಕ ತಿಳಿಸಿದ್ದಾರೆ.
ಕವಿಗೋಷ್ಠಿ: ಬೆಂಗಳೂರಿನ ಶ್ರೀ ಶಾರದ ಪ್ರತಿಷ್ಠಾನ ಹಾಗೂ ಶಾಂತಳ್ಳಿಯ ಪ್ರಕೃತಿ ಕವಿ ಬಳಗದ ವತಿಯಿಂದ ಅಂದು ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು, ಆಸಕ್ತ ಕವಿಗಳು ತಾ. 25 ರೊಳಗೆ ಮೊ: 9481851475, 8197355914 ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿ ಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.