ಶನಿವಾರಸಂತೆ, ಡಿ. 21: ಬೆಸೂರು ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಶ್ರೀಗೌಡನಕೆರೆ ಅಮ್ಮನವರ ದೇವಾಲಯದಲ್ಲಿ ತಾ.23ರಂದು ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಅಂದು ಗುರುಗಣಪತಿ ಪೂಜೆ, ಫಲಾನ್ಯಾಸ ಸಂಕಲ್ಪ, ಗಣಹೋಮ, ಚಂಡಿಕಾಹೋಮ, ಆಶ್ಲೇಷ ಬಲಿಪೂಜೆ ಮತ್ತು ನಾಗಪೂಜೆ, ಮಧ್ಯಾಹ್ನ 12.30ಕ್ಕೆ ಪುಣ್ಯಾಹುತಿ, ಮಹಾಪೂಜೆ ನೆರವೇರಲಿದೆ.