ಗೋಣಿಕೊಪ್ಪ ವರದಿ, ಡಿ. 20 : ಹಾಕಿ ಮೈಸೂರು ವತಿಯಿಂದ ಅಲ್ಲಿನ ಮಹರಾಜಾಸ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಶುಭಾರಂಭ ಮಾಡಿದೆ.
ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಕಿಕೂರ್ಗ್ ತಂಡ 7-0 ಗೋಲುಗಳ ಮೂಲಕ ಹಾಕಿ ಬಳ್ಳಾರಿ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಹಾಕಿ ಕೂರ್ಗ್ ಪರ ಲಿಕಿತ್ 3 ಗೋಲು ಹೊಡೆದರು. 7 ಹಾಗೂ 8 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಹಾಗೂ 36 ನೇ ನಿಮಿಷದಲ್ಲಿ ಲಿಖಿತ್ ಫೀಲ್ಡ್ ಗೋಲು ಬಾರಿಸಿದರು. 22 ಹಾಗೂ 9 ನೇ ನಿಮಿಷದಲ್ಲಿ ಚಿಟ್ಯಪ್ಪ 2 ಗೋಲು, 42 ರಲ್ಲಿ ಬೋಪಣ್ಣ, 44 ರಲ್ಲಿ ಮಂಜುನಾಥ್ ಗೋಲು ಹೊಡೆದರು. ತಂಡದ ತರಬೇತುದಾರರಾಗಿ ಲೋಕೇಶ್, ವ್ಯವಸ್ಥಾಪಕರಾಗಿ ಅರ್ಜುನ ಪಾಲ್ಗೊಂಡಿದ್ದಾರೆ.