ಹೆಬ್ಬಾಲೆ, ಡಿ. 20: ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಿವೃತ್ತ ಶಿಕ್ಷಕರಿಗೆ ಹಾಗೂ ಶಿಕ್ಷಕೇತರರಿಗೆ ಫೆ. 17 ರಂದು ಗುರುವಂದನಾ ಕಾರ್ಯಕ್ರಮ ನಡೆಸಲು ಹಿರಿಯ ವಿದ್ಯಾರ್ಥಿಗಳ ವೇದಿಕೆ ತೀರ್ಮಾನಿಸಿದೆ.

ಹೆಬ್ಬಾಲೆ ಹೈಸ್ಕೂಲ್ ಸಭಾಂಗಣದಲ್ಲಿ ಗುರುವಂದನಾ ಸಮಿತಿ ಅಧ್ಯಕ್ಷ ಹೆಚ್.ವಿ. ಶಿವಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಬ್ಬಾಲೆ ಪ್ರೌಢಶಾಲಾ ಮೈದಾನದಲ್ಲಿ ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಯಿತು.

ಮುಂದಿನ ಫೆ. 17 ರಂದು ಗುರುವಂದನಾ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಊರಿನ ಮುಖ್ಯವೃತ್ತದಿಂದ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸುವದು. ಸಾಹಿತಿ ಕಣಿವೆ ಭಾರದ್ವಜ್ ಮತ್ತು ಮೆ.ನಾ. ವೆಂಕಟನಾಯಕ್ ನೇತೃತ್ವದಲ್ಲಿ ‘ಗುರುಸ್ಮರಣೆ’ ಎಂಬ ಸ್ಮರಣಾ ಸಂಚಿಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.

ಇದೇ ಸಂದರ್ಭ ಕಾರ್ಯಕ್ರಮದ ಯಶಸ್ವಿಯಾಗಿ ಸ್ವಾಗತ, ಹಣಕಾಸು, ಆಹಾರ, ವೇದಿಕೆ, ಪ್ರಚಾರ ಸೇರಿದಂತೆ ಇನ್ನಿತರ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ಹೆಬ್ಬಾಲೆ ಪ್ರೌಢಶಾಲಾ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಲ್. ರಮೇಶ್ ಸಮಿತಿಯ ಪದಾಧಿಕಾರಿಗಳಾದ ಪಿ. ರಾಜನ್, ಹೆಚ್.ಎನ್. ಸುಬ್ರಮಣ್ಯ, ಹೆಚ್.ಹೆಚ್. ಸುಂದರ್, ಟಿ.ಕೆ. ಪಾಂಡುಂರಂಗ, ಟಿ.ಬಿ. ಜಗದೀಶ್, ಎಂ.ಎಂ. ಮೂರ್ತಿ, ಉದಯಕುಮಾರ್, ಹೆಚ್.ಎಲ್. ವೆಂಕಟೇಶ್, ಉಮೇಶ್, ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಎನ್. ಧರ್ಮಪ್ಪ ಇದ್ದರು.