ನಾಪೆÇೀಕ್ಲು, ಡಿ. 20: `ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳಾ’ ಎಂಬ ಕಾವೇರಿ ಮಾತೆಯ ಸುಶ್ರಾವ್ಯವಾದ ಸಂಗೀತ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ಪುಟಾಣಿ ಬಾಲಕಿಯರು, ಮತ್ತೊಂದೆಡೆ ಬಾಳೋಪಾಟ್, ಕೋಲಾಟ್, ಎಲ್ಲಿ ನೋಡಿದರೂ ರಂಗುರಂಗಾದ ಕೊಡವ ಸಾಂಸ್ಕøತಿಕ ಉಡುಪಿನಲ್ಲಿ ಅತ್ತಿಂದಿತ್ತ ಓಡಾಡುತ್ತಿರುವ ಮಕ್ಕಳು. ಹಲವರಲ್ಲಿ ನಾನೇನೋ ಸಾಧನೆ ಮಾಡುತ್ತೇನೆ ಎಂಬ ದೃಢತೆ ಒಟ್ಟಿನಲ್ಲಿ ನಾಪೆÇೀಕ್ಲು ಅಂಕುರ್ ಪಬ್ಲಿಕ್ ಶಾಲಾ ಮೈದಾನದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ ಕೊಡವ ಮಕ್ಕಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಕೊಡವ ಜಾನಪದ ಸಾಂಸ್ಕøತಿಕ ಹಬ್ಬ ನೆರೆದಿದ್ದವರನ್ನು ರಂಜಿಸಿತು.ಕಾರ್ಯಕ್ರಮ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಯಿತು. ಸ್ಪರ್ಧೆಯಲ್ಲಿ ಬೊಳಕಾಟ್, ಉಮ್ಮತ್ತಾಟ್, ಕೋಲಾಟ್, ಸಂಬಂಧ ಅಡ್‍ಕುವೊ, ಬಾಳೋಪಾಟ್, ಕೊಡವ ಪಾಟ್, ವಾಲಗತ್ತಾಟ್, ಪರೆಯಕಳಿ, ಕೊಡವ ನಾಟಕ, ಕೊಡವ ಕವಿಗೋಷ್ಠಿ, ಕೊಡವ ವಿಚಾರಗೋಷ್ಠಿ ನಡೆದವು. ಕಾರ್ಯಕ್ರಮದಲ್ಲಿ 15 ಶಾಲೆಗಳ ತಂಡಗಳು ಪಾಲ್ಗೊಂಡಿದ್ದವು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮಂತ್ರಿ ಎಂ.ಸಿ.ನಾಣಯ್ಯ,
(ಮೊದಲ ಪುಟದಿಂದ) ಕೊಡವರು ಜಾತಿ - ಧರ್ಮಕ್ಕೆ ಆಚಾರ - ವಿಚಾರಕ್ಕೆ ಹೆಚ್ಚಿನ ಬೆಲೆ ನೀಡುವ ಜನಾಂಗ. ಇಲ್ಲಿ ಭಾಷೆ, ಸಂಸ್ಕಾರ, ಸಂಸ್ಕøತಿಗೆ ಪೈಪೆÇೀಟಿ ಇಲ್ಲ. ಎಲ್ಲರೂ ಸಂಸ್ಕøತಿ, ಭಾಷೆ ಆಚಾರ - ವಿಚಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಐದು ಅಕಾಡೆಮಿಗಳನ್ನು ಸ್ಥಾಪಿಸಿದೆ. ಇದರಿಂದ ಆಯಾಯ ಭಾಷೆ, ಧರ್ಮ, ಸಂಸ್ಕøತಿಯ ಬೆಳವಣಿಗೆಯಾಗಿದೆ ಎಂದರು.
ನಾವು ಕೊಡವರು. ನಮ್ಮ ಪೂರ್ವಜರೂ ಕೊಡವರು. ಅಂದ ಮೇಲೆ ನಮಗೆ ಕುಲಶಾಸ್ತ್ರ ಅಧ್ಯಯನದ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು. ಕೊಡಗಿನ ಜನ ಯಾರು ತಮ್ಮ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಬೇಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಮಡ ಪೊನ್ನಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ್ಣ, ಪ್ರಾಂಶುಪಾಲೆ ರತ್ನ ಚರ್ಮಣ್ಣ, ಕೊಡವ ಮಕ್ಕಡ ಕೂಟದ ಉಪಾಧ್ಯಕ್ಷ ಬಾಳೇಯಡ ಪ್ರತೀಶ್ ಪೂವಯ್ಯ, ಕಾರ್ಯದರ್ಶಿ ಪುತ್ತರೀರ ಕರುಣ್ ಕಾಳಯ್ಯ ಇದ್ದರು.
ಈ ಸಂದರ್ಭದಲ್ಲಿ ಕೊಡವ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿರೋಟಿರ ತಮ್ಮಯ್ಯ, ಬಾಳೆಯಡ ಉತ್ತಪ್ಪ, ಕೈಬುಲಿರ ಉತ್ತಯ್ಯ, ಕುಂಡ್ಯೋಳಂಡ ಸುಬ್ಬಯ್ಯ, ಚಿಯಕಪೂವಂಡ ದೇವಯ್ಯ, ನಾಪನೆರವಂಡ ಸೋಮಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅವರನ್ನು ಸನ್ಮಾನಿಸಲಾಯಿತು.
ಅಂಕುರ್ ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಮತ್ತು ನಾಡಗೀತೆ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸ್ವಾಗತ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ ಆಂಗೀರ ಕುಸುಮ್ ನಿರೂಪಿಸಿ, ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ವಂದಿಸಿದರು.
- ಪಿ.ವಿ. ಪ್ರಭಾಕರ್