ಮಡಿಕೇರಿ, ಡಿ. 19 : ವಿವಿಧÀ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಅಖಿಲಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕೊಡಗು ಘಟಕದ ವತಿಯಿಂದ ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕಮಲೇಶ್ ಚಂದ್ರ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸಬೇಕು. ಗ್ರಾಚ್ಯುಟಿ ಹಣವನ್ನು ರೂ. 5 ಲಕ್ಷಕ್ಕೆ ಏರಿಕೆ ಮಾಡಬೇಕು. ಸಮಾನ ಕಂತುಗಳಲ್ಲಿ ಇಎಸೈ, ಇಪಿಎಸ್ ಸ್ಕೀಮನ್ನು ಅನುಷ್ಠಾನಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಯಿತು.

ಅಧ್ಯಕ್ಷ ಪಿ.ಎಸ್. ಕುರಿಯನ್, ಉಪಾಧ್ಯಕ್ಷ ಪೂಣಚ್ಚ, ಕಾರ್ಯದರ್ಶಿ ಮಂಜುನಾಥ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.