ಮಡಿಕೇರಿ, ಡಿ. 20: ಎರಡು ದಶಕದಿಂದ ದೃಶ್ಯವಾಹಿನಿ ಕ್ಯಾಮರ ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಂದ ಗುಜ್ಜರ್ ಸಾವಿಗೆ ಶರಣಾಗಿರುವದಕ್ಕೆ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಸಂತಾಪ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಕೊಡಗು ಪ್ರೆಸ್ ಕ್ಲಬ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಮುಖರು ಸಂತಾಪ ವ್ಯಕ್ತ ಪಡಿಸಿದ್ದರು. ಉಕ್ಕಡದ ರಾಜರಾಜೇಶ್ವರಿ ನಗರದ ಆಶ್ರಮ ಮನೆಯಲ್ಲಿ ನೆಲೆಸಿದ್ದ ನಂದ ಗುಜ್ಜರ್ (46) ಮಂಗಳವಾರ ಮನೆಯಲ್ಲಿ ನೇಣು ಹಾಕಿ ಕೊಂಡಿದ್ದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಸವಿತಾ ರೈ, ಖಜಾಂಚಿ ಅರುಣ್ ಕೂರ್ಗ್, ಕಾರ್ಯದರ್ಶಿ ಆನಂದ ಕೊಡಗು, ಕೇಂದ್ರ ಸಮಿತಿ ಸದಸ್ಯ ಎಸ್.ಎ. ಮುರಳೀಧರ್, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಮಹೇಶ್, ಸೋಮವಾರಪೇಟೆ ತಾಲೂಕ ಅಧ್ಯಕ್ಷ ಹರೀಶ್, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷರಾದ ಬಿ.ಎಸ್. ಲೋಕೇಶ್ಸಾಗರ್, ವಿಘ್ನೇಶ್ ಭೂತನಕಾಡು, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್, ನಿರ್ದೇಶಕ ಎಸ್.ಎಂ. ಮುಬಾರಕ್, ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್, ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಪತ್ರಕರ್ತರಾದ ವಿಶ್ವ ಕುಂಬೂರು, ದಿವಾಕರ್ ಮಾತನಾಡಿದರು. ಮೃತರ ಗೌರವಾರ್ಥ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ನಂದ ಗುಜ್ಜರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವದರ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಂದ ಗುಜ್ಜರ್ ಅಂತ್ಯಕ್ರಿಯೆಗೆ ನೀಡಲಾದ ರೂ. 10 ಸಾವಿರ ಅನ್ನು ಪತ್ನಿ ಶೋಭಾ ಅವರಿಗೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಸವಿತಾ ರೈ ನೀಡಿದರು.
ಟ್ರಸ್ಟ್ ಸಂತಾಪ : ಕಳೆದ ಎರಡು ದಶಕಗಳಿಂದ ದೃಶ್ಯ ಮಾಧ್ಯಮದಲ್ಲಿ ಕ್ಯಾಮರಮೆನ್ ಆಗಿ ಕರ್ತವ್ಯ ನಿರ್ವಹಿಸಿ, ಇದೀಗ ನಮ್ಮನ್ನು ಅಗಲಿರುವ ನಂದ ಗುಜ್ಜರ್ (46) ಅವರ ನಿಧನಕ್ಕೆ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ಬಿ.ಎನ್. ಮನುಶೆಣೈ ಹಾಗೂ ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.