ಮಡಿಕೇರಿ, ಡಿ. 19: ಇತ್ತೀಚೆಗೆ ಕುಶಾಲನಗರ ಬಳಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡ ಆಶಿಕ್ ದಂಪತಿಗಳಿಗೆ ನಮ್ಮ ಕೊಡಗು ತಂಡದ ವತಿಯಿಂದ ನೆರವು ನೀಡಲಾಗಿದೆ. ನಮ್ಮ ಕೊಡಗು ತಂಡ ಸಾಮಾಜಿಕ ಜಾಲತಾಣದಲ್ಲಿ ಕೋರಿದ ನೆರವಿನ ಮನವಿಗೆ ನಾಲ್ಕುನಾಡು ಫ್ರೆಂಡ್ಸ್‍ನ ಷರೀಫ್ ಹಾಗೂ ಸ್ನೇಹಿತರು ಸುಂಟಿಕೊಪ್ಪದ ಜೀನಸ್, ವಿದೇಶದಲ್ಲಿರುವ ಆಸಿಫ್ ನಾಪೋಕ್ಲು, ರಶೀದ್ ಕೂರತ್ ಹಾಗೂ ಇತರರಿಂದ ಸಂಗ್ರಹಿಸಿದ ಹಣವನ್ನು ಆಶಿಕ್ ಅವರ ಸಹೋದರನ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭ ಕೊಪ್ಪ ಗ್ರಾ.ಪಂ. ಸದಸ್ಯ ಖಾದರ್, ನಮ್ಮ ಕೊಡಗು ತಂಡದ ನೌಷದ್ ಜನ್ನತ್, ಲೋಹಿತ್ ಇನ್ನಿತರರಿದ್ದರು.