ವೀರಾಜಪೇಟೆ, ಡಿ. 20: ಮೈಸೂರಿನಿಂದ ವೀರಾಜಪೇಟೆಗೆ ದಿನಸಿ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಟೆಂಪೋವೊಂದು ಮಗುಚಿಕೊಂಡು ಚಾಲಕ ಸೇರಿದಂತೆ ಮೂವರಿಗೆ ಗಾಯಗಳಾಗಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಮೈಸೂರಿನ ಮಂಡಿಮೊಹಲ್ಲಾದ ಇರ್ಫಾನ್ ಎಂಬವರಿಗೆ ಸೇರಿದ ಟೆಂಪೋದಲ್ಲಿ ವೀರಾಜಪೇಟೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ವೀರಾಜಪೇಟೆ ಬಳಿಯ ಕೊಳತ್ತೋಡು ಎಂಬಲ್ಲಿ ಅತಿಯಾದ ಭಾರದಿಂದಾಗಿ ವಾಹನದ ಚಕ್ರ ಸಿಡಿದು ವಾಹನ ಮಗುಚಿಕೊಂಡಿದೆ.
ಚಾಲಕ ಬಾಬು ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ವೀರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಮ್ಮದ್ ಪಾಷ ಹಾಗೂ ಸ್ವಾಮಿ ಎಂಬವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಳಿಗ್ಗೆ 7 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು, ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
-ಕೆ.ಕೆ.ಎಸ್.