ಮಡಿಕೇರಿ, ಡಿ. 20: ನಗರದ ಶ್ರೀ ಮುತ್ತಪ್ಪ ದೇವಾಲಯ ಬಳಿಯ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ವಾರ್ಷಿಕ ದೀಪಾರಾಧನೋತ್ಸವದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಅಧಿಕ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಾದಾರಿಗಳು, ಮಹಿಳೆಯರು, ಮಕ್ಕಳೊಂದಿಗೆ ಭಕ್ತರು ಭಾಗವಹಿಸಿದ್ದರು.

ಈ ನಿಟ್ಟಿನಲ್ಲಿ ಬೆಳಿಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು, ಹೋಮ, ಮಹಾಪೂಜೆಯೊಂದಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಅಪರಾಹ್ನ ಚಂಡೆ ಸೇವೆ, ಪಾಲಕೊಂಬು ಸಹಿತ ಧಾರ್ಮಿಕ ಮೆರವಣಿಗೆ, ಸಂಜೆ ಬಳಿಕ ದೀಪಾರಾಧನೋತ್ಸವ ಸೇವೆಗಳು ಮುಂದುವರಿಯಿತು. ಈ ಸಲುವಾಗಿ ಸನ್ನಿಧಿ ಆವರಣ ಪರಿವಾರ ದೇವರುಗಳಿಗೆ ವಿಶೇಷ ಪೂಜೆಯೊಂದಿಗೆ ರಾತ್ರಿಯಿಡೀ ದೈವಿಕ ಕೈಂಕರ್ಯಗಳು ಮುಂದುವರಿದಿತ್ತು.