ಸೋಮವಾರಪೇಟೆ, ಡಿ. 11: ಕಾರ್ತಿಕ ಮಾಸದ ಅಂಗವಾಗಿ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಹವನ ನೆರವೇರಿತು. ಸೋಮೇಶ್ವರ ದೇವರಿಗೆ ವಿಶೇಷ ಅಲಂಕಾರ, ಅರ್ಚಕ ಪ್ರಸನ್ನ ಭಟ್ ಪ್ರೋತ್ಸಾಹದಲ್ಲಿ ಅಷ್ಟೋತ್ತರ, ಅರ್ಚನೆ ಹಾಗೂ ಗುರು ಶಾಂತಿ ಹೋಮ ನಡೆಯಿತು. ಪೂರ್ಣಾಹುತಿಯ ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಶ್ಯಾಮಸುಂದರ್ ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.