ಮಡಿಕೇರಿ, ಡಿ. 12: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಿದ್ಧಪಡಿಸಿದ 2019-20 ಆರ್ಥಿಕ ವರ್ಷದ ರೂ. 6,092-02 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸತ್ ಸದಸ್ಯ ಪ್ರತಾಪ್ ಸಿಂಹ ಬಿಡುಗಡೆ ಮಾಡಿದರು.
ಸಾಲ ಯೋಜನೆಯ ಪ್ರತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಬಾರ್ಡ್‍ನಿಂದ ಸಿದ್ಧಪಡಿಸಿರುವ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಒಂದು ಉತ್ಕøಷ್ಟ ಸಾಧನವಾಗಿದ್ದು, ಅದರಲ್ಲಿ ವಿವಿಧ ವಲಯಗಳಿಗೆ ಗುರುತಿಸಿರುವ ಸಾಲ ವಿತರಣೆಯ ಪ್ರಮಾಣವನ್ನು ಸಂಪೂರ್ಣವಾಗಿ ಜಿಲ್ಲೆಯ ರೈತರಿಗೆ ಹಾಗೂ ಇತರ ಫಲಾನುಭವಿಗಳಿಗೆ ವಿತರಿಸಿದರೆ ಜಿಲ್ಲೆಯು ಸರ್ವ ತೋಮುಖ ಅಭಿವೃದ್ಧಿ ಹೊಂದು ವದರಲ್ಲಿ ಯಾವದೇ ಸಂಶಯವಿಲ್ಲ. ಕೃಷಿಗೆ ಹಾಗೂ ಇತರ ಆದ್ಯತಾವಲಯಗಳಿಗೆ ಒತ್ತು ಕೊಟ್ಟು ಸಿದ್ಧಪಡಿಸಲಾದ ನಬಾರ್ಡ್‍ನ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲೆಯು ಇತ್ತೀಚಿನ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ತತ್ತರಿಸಿದ್ದು, ಜಿಲ್ಲೆಯ ಜನರು ವಿಶೇಷವಾಗಿ ರೈತರು ಅತೀವ ಸಂಕಷ್ಟದಲ್ಲಿದ್ದು ಅವರಿಗೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಯಾದ ನಂತರ ರೈತರಿಗೆ ಹಿಂದೆ ವಿತರಿಸಿದ ಬೆಳೆ ಸಾಲದ ಮರು ವರ್ಗೀಕರಣ, ಅವಧಿ ಸಾಲದ ಮರು ಪಾವತಿಯ ಅವಧಿಯು ಮುಂದೂಡಿಕೆ ಹಾಗೂ ಇನ್ನಿತರ ಪರಿಹಾರ ಕ್ರಮವನ್ನು ಆದ್ಯತೆಯ ಮೇಲೆ ಜರುಗಿಸಬೇಕು ಎಂದು ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಿಗೆ ಸೂಚಿಸಿದರು.
ಪ್ರಾಸ್ತಾವಿಕ ಮಾತನಾಡಿದ ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ, ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಮುಂದಿನ ಆರ್ಥಿಕ ವರ್ಷದ ಸಾಲ ವಿತರಣೆಯ ಗುರಿ ನಿಗದಿಪಡಿಸಲು ಒಂದು ಕೈಪಿಡಿ ಯಾಗಿದೆ ಎಂದರು.
ಈ ಸಾಲ ಯೋಜನೆ ಆಧಾರದ ಮೇಲೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನಿಂದ ವಾರ್ಷಿಕ ಸಾಲ ವಿತರಣೆಯ ಗುರಿ ನೀಡಲಾಗುತ್ತದೆ. ಈ ಸಾಲ ಯೋಜನೆಯು ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ, ಹವಾಮಾನ, ರೈತ ಕುಟುಂಬಗಳ ಸಂಖ್ಯೆ, ಬೆಳೆಯುತ್ತಿರುವ ವಿವಿಧ ರೀತಿಯ ಬೆಳೆಗಳು, ಜಲಸಂಪನ್ಮೂಲ ವ್ಯವಸ್ಥೆ, ಯಾಂತ್ರೀಕರಣ, ಭೂ ಅಭಿವೃದ್ಧಿ, ವಿವಿಧ ಇಲಾಖೆಗಳಿಂದ ಅನುಷ್ಠಾನ ಗೊಳ್ಳುತ್ತಿರುವ ಸರ್ಕಾರಿ ಯೋಜನೆಗಳು, ಕಿರು ಉದ್ಯಮ ಮತ್ತು ಮಧ್ಯಮ ಉದ್ಯಮಗಳಿಗೆ ಇರುವ ಅವಕಾಶಗಳು, ಶಿಕ್ಷಣ, ಗೃಹ, ರಫ್ತು ಹಾಗೂ ನವೀಕರಣ ಇಂಧನ ಹಾಗೂ ಇತರೇ ಆದ್ಯತಾ ವಲಯಗಳಿಗೆ ಇರುವ ಅವಕಾಶಗಳನ್ನು ಗುರುತಿಸಿ ಸಿದ್ಧಪಡಿಸಲಾಗಿದೆ. ಹಾಗೂ ಇದು ಒಂದು ಪರಿಪಕ್ವವಾದ ಸಾಲ ಯೋಜನೆಯಾಗಿದ್ದು, ಜಿಲ್ಲೆಯ ಎಲ್ಲಾ ಬ್ಯಾಂಕು ಶಾಖೆಗಳು ತಮಗೆ ನೀಡಲಾಗುವ ವಾರ್ಷಿಕ ಗುರಿ ಸ್ವೀಕರಿಸಿ, ಅದರ ಗುರಿಯನ್ನು ಸಂಪೂರ್ಣವಾಗಿ ತಲಪಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ಆರ್ಥಿಕ ವರ್ಷಕ್ಕೆ ಬೆಳೆ ಸಾಲಕ್ಕೆ ರೂ. 3,345.79 ಕೋಟಿ ಅವಧಿ ಸಾಲ ಮತ್ತು ಇತರ ಕೃಷಿ ಚಟುವಟಿಕೆಗಳಿಗಾಗಿ ರೂ. 1118.74 ಕೋಟಿ, ಕೃಷಿ ಮೂಲ ಸೌಕರ್ಯ ವ್ಯವಸ್ಥೆಗಳಿಗಾಗಿ ರೂ. 127.42 ಕೋಟಿ, ಕೃಷಿ ಸಹ ಚಟುವಟಿಕೆಗಳಿಗೆ ರೂ. 120.46 ಕೋಟಿ, ಒಟ್ಟು ಕೃಷಿ ವಲಯಕ್ಕೆ ರೂ. 4,712.41 ಕೋಟಿ ಸಾಲ ವಿತರಣೆಯ ಅವಕಾಶ ಇರುವದಾಗಿ ತಿಳಿಸಿದರು.
ಅಂತೆಯೇ ಕಿರು ಹಾಗೂ ಮಧ್ಯಮ ಕೈಗಾರಿಕೋದ್ಯಮ ಸ್ಥಾಪನೆ ಮತ್ತು ವಿಸ್ತರಣೆಗಾಗಿ ರೂ. 474.85 ಕೋಟಿ, ರಫ್ತು ಉದ್ಯಮಕ್ಕೆ ರೂ. 403.92 ಕೋಟಿ, ಶಿಕ್ಷಣಕ್ಕೆ 202.73 ಕೋಟಿ, ಗೃಹ ನಿರ್ಮಾಣಕ್ಕೆ ರೂ. 277.20 ಕೋಟಿ, ನವೀಕರಣ ಇಂಧನಕ್ಕೆ ರೂ. 6.66 ಕೋಟಿ ಹಾಗೂ ಸಾಮಾಜಿಕ ಹೂಡಿಕೆ ಹಾಗೂ ಮೂಲ ಸೌಕರ್ಯಗಳಿಗಾಗಿ ರೂ. 14.25 ಕೋಟಿ ಸಾಲ ವಿತರಣೆಯ ಅವಕಾಶವನ್ನು ಗುರುತಿಸಲಾಗಿದ್ದು, ಆದ್ಯತಾ ವಲಯದ ಚಟುವಟಿಕೆ ಗಳಿಗಾಗಿ ಒಟ್ಟಾರೆ ರೂ. 6,092.02 ಕೋಟಿ ಸಾಲ ವಿತರಣೆಯ ಮೊತ್ತ ವನ್ನು ಗುರುತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಂಭವಿಸಿದ ಇತ್ತೀಚಿನ ದುರಂತ ಜನರ ಜೀವನವನ್ನು ತಲ್ಲಣಗೊಳಿಸಿದ್ದು, ಜಿಲ್ಲೆಯ ಜನತೆ ವಿಶೇಷವಾಗಿ ರೈತ ಸಮುದಾಯ ಈ ಆಘಾತದಿಂದ ಚೇತರಿಸಿಕೊಳ್ಳಲು ವರ್ಷಗಟ್ಟಲೇ ಬೇಕಾಗಿದ್ದು, ಈ ಕಷ್ಟಕರ ಸಂದರ್ಭದಲ್ಲಿ ಅವರಿಗೆ ಸಹಾಯ ಹಸ್ತನೀಡಿ, ಸಂತ್ರಸ್ತ ಜನತೆಯು ತಮ್ಮ ಬದುಕನ್ನು ಮತ್ತೊಮ್ಮೆ ಕಟ್ಟಿಕೊಳ್ಳು ವಂತಾಗಲು ಜಿಲ್ಲೆಯ ಪ್ರತಿಯೊಂದು ಬ್ಯಾಂಕುಗಳು ಶ್ರಮಿಸಬೇಕು ಮತ್ತು ಆ ನಿಟ್ಟಿನ್ಲಲಿ ಅವಿರತವಾಗಿ ಪ್ರಯತ್ನಿಸ ಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕಾರ್ಪೋರೇಷನ್ ಬ್ಯಾಂಕಿನ ಮೈಸೂರಿನ ವಲಯ ಕಚೇರಿಯ ಉಪ ಮಹಾ ಪ್ರಬಂಧಕ ಎಸ್.ಎಲ್. ಗಣಪತಿ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ಕೃಷಿ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿದ್ದು, ಗ್ರಾಮೀಣ ಅಭಿವೃದ್ಧಿಯ ಮಹತ್ತರ ಕನಸನ್ನು ಹೊಂದಿದೆ. ಆ ನಿಟ್ಟಿನಲ್ಲಿ ಬ್ಯಾಂಕು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಬಾರ್ಡ್‍ನ ಸೇವೆ ಶ್ಲಾಘನೀಯ ಎಂದು ತಿಳಿಸಿದರು. ನಬಾರ್ಡ್‍ನ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿ ಯಿಂದ ಮಹತ್ವವನ್ನು ಪಡೆದು ಕೊಂಡಿದ್ದು, ಈ ಯೋಜನೆಯು ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸಲು ಬಹಳಷ್ಟು ಸಹಕಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಗುಪ್ತಾಜಿ ಮಾತನಾಡಿ, ಜಿಲ್ಲೆಯಲ್ಲಿ ನಬಾರ್ಡ್ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಯಿಂದ ತಾನು ಬಹಳಷ್ಟು ಪ್ರಭಾವಿತನಾಗಿದ್ದೇನೆ ಹಾಗೂ ನಬಾರ್ಡ್ ಜಿಲ್ಲಾ ಸಹಾಯಕ ಮಹಾ ಪ್ರಬಂಧಕರ ಸಹಯೋಗದಲ್ಲಿ ಜಿಲ್ಲೆಯ ಇತ್ತೀಚಿನ ದುರಂತದ ಸಂದರ್ಭದಲ್ಲಿ ಮತ್ತು ತದನಂತರ ಜಿಲ್ಲೆಯ ಜನತೆಗೆ ಒದಗಿಸಬೇಕಾಗಿರುವ ಆರ್ಥಿಕ ಪರಿಹಾರ ಪ್ರಕ್ರಿಯೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ವಿಶೇಷ ಜಿಲ್ಲಾ ಸಲಹಾ ಸಮಿತಿಯ ಸಭೆಯನ್ನು ಕರೆದು ವಿವರವಾಗಿ ಚರ್ಚಿಸಿ, ಭಾರತೀಯ ರಿಸರ್ವ್ ಬ್ಯಾಂಕು ಬೆಂಗಳೂರು ಮತ್ತು ಮುಂಬಯಿ ಕಾರ್ಯಾಲಯಗಳಿಂದ ವಿಶೇಷ ಅನುಮತಿಯೊಂದಿಗೆ ಸಮಯ ವಿಸ್ತರಣೆಯನ್ನು ಪಡೆದು ಜಿಲ್ಲೆಯ ಬ್ಯಾಂಕುಗಳ ಎಲ್ಲಾ ಗ್ರಾಹಕರಿಗೆ ಬೆಳೆಸಾಲ ಮರು ವರ್ಗೀಕರಣ, ಅವಧಿ ಸಾಲದ ಮರು ಪಾವತಿಯ ಸಮಯ ವಿಸ್ತರಣೆ ಹಾಗೂ ಇನ್ನಿತರ ಹಲವು ಅನುಕೂಲಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕು ಮತ್ತು ನಬಾರ್ಡ್ ಜೊತೆಯಾಗಿ ಹಲವು ಕಾರ್ಯಕ್ರಮಗಳೊಂದಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ನಬಾರ್ಡ್‍ನಿಂದ ಸಿದ್ಧಪಡಿಸಲಾದ ಸಾಲ ಯೋಜನೆ ಯನ್ನು ಹೆಚ್ಚು ಕಮ್ಮಿ ಯಥಾವತ್ತಾಗಿ ಅನುಷ್ಠಾನಗೊಳಿಸಲು ಶ್ರಮಿಸುವದಾಗಿ ಭರವಸೆ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿ ಗಳು, ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ಇಲಾಖಾ ಮುಖ್ಯಸ್ಥರು ಭಾಗವಹಿಸಿದ್ದರು.