ಗುಡ್ಡೆಹೊಸೂರು, ಡಿ. 11: ಗುಡ್ಡೆಹೊಸುರು ಅರೆ ಭಾಷೆ ಗೌಡ ಸಂಘದ ವಾರ್ಷಿಕ ಮಹಾಸಭೆ ಇಲ್ಲಿನ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಕೋಡಿ ರಾಮ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು.

ಅತಿಥಿಯಾಗಿ ವಕೀಲ ಮುಕ್ಕಾಟಿ ಜಯಚಂದ್ರ ಪಾಲ್ಗೊಂಡು ಮಾತನಾಡಿದರು. ಈ ಸಂದÀರ್ಭ ಸಂಘದ ಸದಸ್ಯರಾಗಿದ್ದು ಮೃತರಾದವರಿಗೆ ಮತ್ತು ಕೊಡಗಿನಲ್ಲಿ ಮಹಾಮಳೆಗೆ ಜೀವ ಕಳೆದುಕೊಂಡವರಿಗೆ ಶಾಂತಿ ಕೋರಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಅಭಿಜ್ಞಾ ಹಾಗೂ ಆದಿತ್ಯ,

ಭರತನಾಟ್ಯದಲ್ಲಿ ಸಾಧನೆ ಮಾಡಿದ ಪ್ರಗತಿ, ವೈದ್ಯಶ್ರೀ ಪ್ರಶಸ್ತಿ ವಿಜೇತ ಡಾ. ಚೇತನ್, ಛಾಯಾಗ್ರಾಹಕ ಪ್ರಶಸ್ತಿ ವಿಜೇತ ವಿಶುಕುಮಾರ್, ಇವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಸಂಘದ ಮತ್ತೂಬ್ಬ ಸದಸ್ಯರಾದ ಮೇಡತನ ಡಾ. ಚೇತನ್ ಅವರಿಗೆ ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 29ನೇ ಸರಕಾರಿ ವೈಧ್ಯಾಧಿ ವೇದಿಕೆಯಲ್ಲಿ ಉಪಾಧ್ಯಕ್ಷ ಪಳಂಗಾಯ ಎಲ್ಲಿಯಣ್ಣ, ಕಾರ್ಯದರ್ಶಿ ನಡುಗಲ್ಲು ಬಾಲಕೃಷ್ಣ, ಸಹಕಾರ್ಯದರ್ಶಿ ಗುಡ್ಡೆಮನೆ ರವಿ, ಖಜಾಂಚಿ ತಾರಹೇಮರಾಜ್ ಮತ್ತು ನಿರ್ದೇಶಕ ಕುಡೆಕಲ್ಲು ಗುರುಪ್ರಸಾದ್ ಮತ್ತಿತರರು ಇದ್ದರು. ಕುಡೆಕ್ಕಲ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಗತಿ ಪ್ರಾರ್ಥಿಸಿದರು. ಗುಡ್ಡೆಮನೆ ರವಿ ಸ್ವಾಗತಿಸಿದರು. ತಾರಹೇಮರಾಜ್ ವಂದಿಸಿದರು.