ಮೂರ್ನಾಡು, ಡಿ. 11: ಮೂರ್ನಾಡು ವಿದ್ಯಾಸಂಸ್ಥೆಯ ಕ್ಲೀನ್ ಇಂಡಿಯಾ ಬ್ರಿಗೇಡ್‍ನ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.

ಮೂರ್ನಾಡುವಿನ ಅಯ್ಯಪ್ಪ ದೇವಸ್ಥಾನದಲ್ಲಿ ಕ್ಲೀನ್ ಇಂಡಿಯಾ ಬ್ರಿಗೇಡ್‍ನ ಅಧ್ಯಕ್ಷ ನಂದೇಟಿರ ರಾಜಾ ಮಾದಪ್ಪ ಚಾಲನೆ ನೀಡಿದರು. ಕ್ಲೀನ್ ಇಂಡಿಯಾ ಬ್ರಿಗೇಡ್‍ನ ನಾಲ್ಕು ತಂಡಗಳ ಸ್ವಯಂಸೇವಕರು ವೀರಾಜಪೇಟೆ ರಸ್ತೆಯ ಕಾಕೋಟುಪರಂಬುವಿನಿಂದ ಮಡಿಕೇರಿ ರಸ್ತೆಯ ಮುತ್ತಾರ್ಮುಡಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು, ಚೀಲಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿದರು. ವಿದ್ಯಾಸಂಸ್ಥೆಯ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಯು.ಸಿ. ಮಾಲತಿ ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಪಿ.ಸಿ. ಸುಬ್ರಮಣಿ, ನಿರ್ದೇಶಕ ಬಡುವಂಡ ಸುಬ್ರಮಣಿ ಹಾಜರಿದ್ದರು.