ಗೋಣಿಕೊಪ್ಪ ವರದಿ, ಡಿ. 12: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಎ. ಡಿವಿಜóನ್ ಹಾಕಿಲೀಗ್ ತಾ. 13 ರಿಂದ (ಇಂದಿನಿಂದ) ಆರಂಭಗೊಳ್ಳಲಿದ್ದು, 17 ತಂಡಗಳು ಪಾಲ್ಗೊಳ್ಳುತ್ತಿವೆ.

ಹಾತೂರು ಯೂತ್ ಕ್ಲಬ್, ಪೊದ್ದ್‍ಮಾನಿ ಬ್ಲೂಸ್ಟಾರ್, ಟಾಟಾ ಕಾಫಿ, ಡಾಲ್ಪೀನ್ಸ್, ಬಿಬಿಸಿ, ಎಂಆರ್‍ಎಫ್ ಮೂರ್ನಾಡ್, ನಾಪೋಕ್ಲು ಶಿವಾಜಿ, ಬಲಮುರಿ, ಚಾರ್ಮರ್ಸ್, ಯುನೈಟೆಡ್ ಮರ್ಕರ, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಬೇಗೂರು ಈಶ್ವರ ಯೂತ್ ಕ್ಲಬ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್, ಕೋಣಕಟ್ಟೆ ಇಲೆವೆನ್, ಯುಎಸ್‍ಸಿ ಬೇರಳಿನಾಡ್, ಮಲೆನಾಡ್ ಹುದಿಕೇರಿ ತಂಡಗಳು ಸ್ಪರ್ಧೆಯಲ್ಲಿವೆ.