ಸೋಮವಾರಪೇಟೆ, ಡಿ. 11: ಷಷ್ಠಿ ಹಬ್ಬದ ಪ್ರಯುಕ್ತ ತಾ. 13ರಂದು ಸ್ಥಳೀಯ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಾಗದೇವತೆಗಳಿಗೆ ಆಶ್ಲೇಷ ಪೂಜೆ ಸೇರಿದಂತೆ ವಿವಿಧ ಅಭಿಷೇಕಗಳು ನಡೆಯಲಿವೆ ಎಂದು ದೇವಾಲಯ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರಸನ್ನ ನಾಯರ್ ತಿಳಿಸಿದ್ದಾರೆ.
ತಾ. 13ರಂದು ಬೆಳಗ್ಗೆ 8.30ರಿಂದ 10.30ರವರೆಗೆ ನಾಗದೇವತೆಗಳ ಸನ್ನಿಧಾನದಲ್ಲಿ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿಯವರ ಪೌರೋಹಿತ್ಯ ದಲ್ಲಿ ಆಶ್ಲೇಷ ಪೂಜೆ, ಶಿಯಾಳ, ಹಾಲು ಹಾಗೂ ಅರಿಶಿಣಾಭಿಷೇಕ ಗಳು ನಡೆಯಲಿವೆ ಎಂದು ಪ್ರಸನ್ನ ಮಾಹಿತಿ ನೀಡಿದ್ದಾರೆ.