ನಾಪೋಕ್ಲು, ಡಿ. 11: ವಿದ್ಯಾರ್ಜನೆ ಎಂಬದು ಹಣಗಳಿಕೆ ಮತ್ತು ಆಡಂಬರದ ಜೀವನಕ್ಕೆ ಮೀಸಲಾಗದೇ ಶಿಸ್ತು, ಗೌರವ, ದಯೆ, ಕರುಣೆ, ಮಾನವಿಯ ಮೌಲ್ಯಗಳಿಗೆ ಒತ್ತು ಕೊಡುವಂತಾಗಬೇಕು ಎಂದು ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಹೇಳಿದರು.

ಅವರು ಸ್ಥಳೀಯ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಕ್ರೀಡೋತ್ಸವದ ಧ್ವಜಾರೋಹಣಗೈದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿ ಶಾಲಾ ದಿನಗಳಲ್ಲಿ ಎನ್‍ಸಿಸಿ, ಸ್ಕೌಟ್ಸ್, ಗೈಡ್ಸ್ ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯು ವಂತಾಗಬೇಕು ಎಂದರು.

ಈ ಸಂದರ್ಭ ವಿನಯ್ ರೂ. 10,000 ಉದಾರವಾಗಿ ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕ್ರೀಡೋತ್ಸವ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೊಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಟ್ರಸ್ಟಿಗಳಾದ ಅಪ್ಪರಂಡ ಅಪ್ಪಯ್ಯ, ಅರೆಯಡ ಸೋಮಪ್ಪ, ಪ್ರೊ. ಕಲಿಯಾಟಂಡ ಪೂಣಚ್ಚ, ಕೊಂಬಂಡ ಗಣೇಶ್, ನಿವೃತ್ತ ಡಿವೈಎಸ್‍ಪಿ ಬೊಪ್ಪಂಡ ಕುಶಾಲಪ್ಪ, ನಾಯಕಂಡ ದೀಪಕ್, ಪ್ರಾಂಶುಪಾಲೆ ಬಿ.ಎಂ. ಶಾರದಾ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಯಾನಾ ದೇಚಮ್ಮ ಪ್ರಾರ್ಥನೆ ಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕಿ ಸರಿತಾ ಕ್ರೀಡಾ ವರದಿ, ಶಿಕ್ಷಕಿ ರೀನಾ ಅತಿಥಿಗಳ ಪರಿಚಯ ಮಾಡಿದರು. ಸಹಶಿಕ್ಷಕ ಭಗವತಿ ಪ್ರಸಾದ್ ವಂದಿಸಿದರು.