ನಾಪೆÇೀಕ್ಲು, ಡಿ. 11: ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಮತ್ತು ವೈಜ್ಞಾನಿಕ ಯುಗದಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದರು.

ವಿವೇಕಾನಂದ ಯೂತ್ ಮೂವ್‍ಮೆಂಟ್, ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಸಿ.ವಿ. ರಾಮನ್ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಾಗ ಬೇಕಾದರೆ ವೈಜ್ಞಾನಿಕ ಮುನ್ನಡೆ ಸಾಧಿಸಬೇಕು. ಶಾಲಾ ಹಂತದಲ್ಲಿಯೇ ವೈಜ್ಞಾನಿಕ ಚಿಂತನೆಯನ್ನು, ವೈಜ್ಞಾನಿಕ ಮನೋಭಾವನೆಯನ್ನು ವಿದ್ಯಾರ್ಥಿ ಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲೆ ಪಿ.ಕೆ.ನಳಿನಿ ಮಾತನಾಡಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸು ವದು ಒಂದು ದೊಡ್ಡ ಸವಾಲು. ವಿದ್ಯಾರ್ಥಿಗಳು ತಮಗೆ ಲಭಿಸುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವ ಹಾಗೂ ವೈಜ್ಞಾನಿಕವಾಗಿ ಆಲೋಚನೆ ಮಾಡುವ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ವಸ್ತು ಪ್ರದರ್ಶನ, ಆಶುಭಾಷಣ, ಅಳಗುಳಿ ಮನೆ, ಮೈನಸ್-ಮೈನಸ್ ಸ್ಪರ್ಧೆಗಳು ಜರುಗಿದವು.

ಮೈನಸ್-ಮೈನಸ್ ಸ್ಪರ್ಧೆಯಲ್ಲಿ ಭಾಗಮಂಡಲದ ಕಾವೇರಿ ಪ್ರೌಢಶಾಲೆಯ ವಿದ್ಯಾರ್ಥಿ ಅಜಯ್ ಪ್ರಥಮ ಹಾಗೂ ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ದೇವಿಕಾ ದ್ವಿತೀಯ ಸ್ಥಾನ ಪಡೆದರು. ಅಳಗುಳಿ ಸ್ಪರ್ಧೆಯಲ್ಲಿ ಮದೆಮಹೇಶ್ವರ ಪ್ರೌಢಶಾಲೆಯ ದಿವಿನ್‍ಕುಮಾರ್ ಪ್ರಥಮ ಹಾಗೂ ಕಡಗದಾಳು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರತೀಕ್ಷಾ ಪಡೆದರು. ಆಶುಭಾಷಣ ಸ್ಪರ್ಧೆಯಲ್ಲಿ ಮೂರ್ನಾಡು ಪ್ರೌಢಶಾಲೆಯ ಪೂಜಾ ಪ್ರಥಮ ಸ್ಥಾನ ಹಾಗೂ ನಾಪೆÇೀಕ್ಲು ಸರಕಾರಿ ಪ್ರೌಢಶಾಲೆಯ ನೇಸರ ದ್ವಿತೀಯ ಸ್ಥಾನ ಗಳಿಸಿದರು. ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿನಿ ವೇದಿಕಾ ಹಾಗೂ ನಾಪೆÇೀಕ್ಲು ಸರಕಾರಿ ಪ್ರೌಢಶಾಲೆಯ ಆದಿಲ್ ದ್ವಿತೀಯ ಸ್ಥಾನ ಗಳಿಸಿದರು. ತಾಲೂಕು ಮಟ್ಟದ ವಿಜ್ಞಾನ ಮೇಳದಲ್ಲಿ ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗಳಿಸಿದರು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರವಿಶಂಕರ್, ಸಂಯೋಜಕ ಧನಂಜಯ, ಸದಸ್ಯ ಶ್ರೀಹರಿ, ಉಪನ್ಯಾಸಕಿ ಸುಪ್ರಿಯ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಸಂಘಟಕರು ಪಾಲ್ಗೊಂಡಿದ್ದರು.