ಒಡೆಯನಪುರ, ಡಿ. 11: ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುವ ಕೆಲಸವನ್ನು ಪೋಷಕರು ಮಾಡಬೇಕಾಗಿದೆ ಎಂದು ಬೆಂಗಳೂರು ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾದ್ಯಕ್ಷ ನಿರ್ಮಾಲಾನಂದ ಮಹಸ್ವಾಮೀಜಿಯವರು ಹೇಳಿದರು. ಸಮೀಪದ ಹೊಸೂರು ಬೆಟ್ಟದ ಬಸವೇಶ್ವರ ದೇವಾಲಯದಲ್ಲಿ ನಡೆದÀ ಕೌಟೆಕಾಯಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತ ಉತ್ತಮ ಸಮಾಜ ನಿರ್ಮಾಣಕ್ಕೆ ಮತ್ತು ದೇಶಕ್ಕೆ ಶಕ್ತಿ ಬರಬೇಕಾದರೆ ಎಲ್ಲರಲ್ಲಿಯೂ ಶಿಕ್ಷಣ ಅವಶ್ಯಕವಾಗಿದೆ ಎಲ್ಲರೂ ಶಿಕ್ಷಣವಂತರಾಗಿ. ಸಂಸ್ಕಾರ ಸಂಸ್ಕøತಿಯನ್ನು ಮಕ್ಕಳಿಗೆ ಹೇಳಿಕೊಡ ಬೇಕಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕøತಿ ಉಳಿಸಿ ಬೆಳೆಸುವದೇ ಇಂದಿನ ಮಕ್ಕಳು ಎಂದರು. ಮನಸ್ಸಿನ ಕೊಳೆಯನ್ನು ತೊಳೆಯಲು ಇಂತಹ ದೇವಾಲಯಗಳು, ಜಾತ್ರೆಗಳು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಬುನಾಥ ಸ್ವಾಮೀಜಿ, ಕಾಫಿ ಬೆಳೆಗಾರ ಆರ್.ಪಿ. ಲಕ್ಷ್ಮಣ್, ಶನಿವಾರಸಂತೆಯ ಪ್ರತ್ರಕರ್ತ ವಿ.ಸಿ. ಸುರೇಶ್ ಒಡೆಯನಪುರ, ಜೆಸಿಐ ಸ್ಥಾಪಕ ಅಧ್ಯಕ್ಷ ಹೆಚ್.ಕೆ. ರಮೇಶ್, ಜೆಸಿಐ ಅಧ್ಯಕ್ಷ ಹೆಚ್.ಕೆ. ಅಶ್ವತ್ ಮುಂತಾದವರಿದ್ದರು.
ಇದೆ ಸಂದರ್ಭದಲ್ಲಿ ಬೆಂಗಳೂರಿನ ಜಾಗಟೆ ಇಂಡಸ್ಟ್ರಿಯಲ್ ಉದ್ಯಮಿ ಜಾಗಟೆ ಶಿವಕುಮಾರ್, ಹಾಸನ ನಾಡ ಸಹ್ಯಾದ್ರಿ ಪತ್ರಿಕೆಯ ಸಂಪಾದಕ ಗೋಪಾಲ್ ಬಾಳ್ಳು ಹಾಗೂ ಹಾಸನ ಮಲೆನಾಡು ತಾಂತ್ರಿಕ ಮಹಾವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ. ಯೋಗೇಂದ್ರ ಇವರನ್ನು ಬೆಟ್ಟದ ಬಸವೇಶ್ವರ ದೇವಾಲಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಜಾತ್ರಾ ಪ್ರಯುಕ್ತ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಜಾತ್ರೋತ್ಸವ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
- ಚಿತ್ರ ವರದಿ: ವಿ.ಸಿ ಸುರೇಶ್ ಒಡೆಯನಪುರ