ವೀರಾಜಪೇಟೆ, ಡಿ. 12: ಇಂದು ಮಧ್ಯಪ್ರದೇಶ, ಛತೀಸ್ಗಡ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಪಟ್ಟಣದ ಗಡಿಯಾರ ಕಂಬದ ಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸ ಲಾಯಿತು. ಈ ಸಂದÀರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ ಅವರು, ಮುಂದಿನ ಸಂಸತ್ ಚುನಾವಣೆಯಲ್ಲಿ ಮೋದಿ ಅಲೆಯೂ ಇಲ್ಲ, ಬಿಜೆಪಿಯೂ ಇಲ್ಲ ಅದನ್ನು ಜನರು ತಿರಸ್ಕರಿಸಿದ್ದಾರೆ. ಬರೇ ಸುಳ್ಳು ಭರವಸೆ, ಬಣ್ಣದ ಮಾತಿನಿಂದ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ ಎಂದು ಮೂರು ರಾಜ್ಯದ ಜನತೆ ತೋರಿಸಿದ್ದಾರೆ ಎಂದರು.
ಬಿಜೆಪಿ ಕಳೆದ ಸಂಸತ್ ಚುನಾವಣೆಯಲ್ಲಿ ಅದ್ಭುತವಾದ ಭರವಸೆ ನೀಡಿ ಬಾರಿ ನಿರೀಕ್ಷೆ ಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆದರೆ ನಂತರದ ದಿನದಲ್ಲಿ ಅದು ಯಾವ ಭರವಸೆ ಯನ್ನೂ ಈಡೇರಿಸುವಲ್ಲಿ ವಿಫಲ ವಾಯಿತು. ನೋಟ್ ಬ್ಯಾನ್ ಮಾಡಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿತು, ತೆರಿಗೆ ಹೊರೆಯನ್ನು ಜನರ ಮೇಲೆ ಹೇರಿತು. ಅದರ ಆಡಳಿತದ ರಾಜ್ಯದಲ್ಲಿಯೂ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲಿಲ್ಲ. ಅದರಿಂದ ಬೇಸತ್ತ ಜನತೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡಿದ್ದಾರೆ. ಇದು ಪಕ್ಷಕ್ಕೆ ಮರುಚೈತನ್ಯ ನೀಡಿದ್ದು, ಮುಂದಿನ ಲೋಕಸಭೆಯ ಚುನಾವಣೆಯ ದಿಕ್ಕ್ಸೂಚಿಯಾಗಲಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟವಾಗಿದೆ ಎಂದು ಅಬ್ದುಲ್ ಸಲಾಂ ಹೇಳಿದರು.
ನಗರಾಧ್ಯಕ್ಷ ಜಿ.ಜಿ. ಮೋಹನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಏಜಾಜ್ ಅಹ್ಮದ್, ಪ.ಪಂ. ಸದಸ್ಯರಾದ ಬೆನ್ನಿ ಅಗಸ್ಟಿನ್, ಫಸಿಹಾ ತಬಸುಂ ಪಟ್ಟಡ ರಂಜಿ, ರಾಫಿ, ಡಿ.ಪಿ.ರಾಜೇಶ್ ಮತ್ತು ಸಿ.ಕೆ. ಪ್ರಥ್ವಿನಾಥ್, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ಕಾರ್ಯದರ್ಶಿ ಸುಬ್ಬಯ್ಯ, ಪಕ್ಷದ ಪ್ರಮುಖರಾದ ಮಾದಂಡ ಪೂವಯ್ಯ, ಸಿ.ಕೆ. ಹಮೀದ್, ಗಾಯತ್ರಿ ನರಸಿಂಹ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪಕ್ಷದವರು ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು.