ಗೋಣಿಕೊಪ್ಪ ವರದಿ, ಡಿ. 11: ಕೈಕೇರಿಯಲ್ಲಿರುವ ಬ್ರಾಹ್ಮಣದ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ರಜತ ಮಹೋತ್ಸವದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಹೆಚ್.ಜೆ. ಅಪೂರ್ವ, ವಸುಂದರ ಬಾರ್ಗವ್, ಸುದನ್ವ ಕಶ್ಯಪ್, ಬಿ.ಆರ್. ಹೃತ್ವಿಕ್, ಬಿ.ಜೆ. ವೈಷ್ಣವಿ, ಕೆ.ಎಸ್. ಹರ್ಷಿತಾ, ಪಿ.ಸಿ. ಸೌಜನ್ಯ, ಸಂಪ್ರೀತಾ, ಹೆಚ್.ಎ. ಅರ್ಪಿತಾ, ಅರ್ಚನಾ ಶರ್ಮ, ತೀರ್ಥೇಶ್, ಬಿ.ಎಸ್. ಸೋನಿಕಾ ಸನ್ಮಾನ ಸ್ವೀಕರಿಸಿದರು.

ಸಂಗೀತದಲ್ಲಿ ಸಾಧನೆ ಮಾಡಿದ ಅನ್ವಿತ್‍ಕುಮಾರ್, ಮೇಘನಾ ವಸುಂದರ, ಅಮೃತಾ ಭರತ್, ಅನನ್ಯಶರ್ಮ, ಕೃಷಿ ಸಾಧಕ ರವಿಶಂಕರ್, ಜೈಶಂಕರ್, ಎ.ವಿ. ಮಂಜುನಾಥ್, ಜಯರಾಂ ಸೋಮಯಾಜಿ, ಸುರಕ್ಷ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಟಿ.ಎಸ್. ಕೃಷ್ಣಮೂರ್ತಿ, ಕಾರ್ಯದರ್ಶಿ ಸದಾನಂದ ಪುರೋಹಿತ, ಪ್ರಮುಖರುಗಳಾದ ಶಾರದಾಮಣಿ, ವಿಷ್ಣುಮೂರ್ತಿ ಇತರರು ಇದ್ದರು.