ಪೆರಾಜೆ, ಡಿ.12: ಇಲ್ಲಿಗೆ ಸಮೀಪದ ಕುಂಬಳಚೇರಿ ರಾಜೇಶ್ ಕೆ.ಆರ್ ಅವರ ಮನೆಯ ಪಕ್ಕದ ತೋಟದಲ್ಲಿ ಬೃಹತ್ ಗಾತ್ರದ ಎರಡು ಹೆಬ್ಬಾವು ಪತ್ತೆಯಾಗಿದ್ದವು. ಅದನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕೊಡಗು ಸಂಪಾಜೆ ಅರಣ್ಯ ಸಿಬ್ಬಂದಿಯವರ ಸಮ್ಮುಖದಲ್ಲಿ ಕೊಯನಾಡು-ದೇವರಕೊಲ್ಲಿ ಸಮೀಪದ ದಟ್ಟ ಅರಣ್ಯಕ್ಕೆ ಬಿಡಲಾಯಿತು.

ಬೆಳಿಗ್ಗೆ 11ಗಂಟೆಗೆ ಎರಡು ಹಾವುಗಳು ಪ್ರತ್ಯೇಕ್ಷವಾಗಿದ್ದು, ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿ ತದನಂತರ ಭುವನ್ ಕುಂಬಳಚೇರಿ, ಪ್ರದೀಪ್ ಕುಂಬಳಚೇರಿ, ಕಿರಣ್ ಕುಂಬಳಚೇರಿ,ಪ್ರಕಾಶ್ ಕೊಳಂಗಾಯ ಸೇರಿ ಸುಮಾರು 9 ಅಡಿ ಮತ್ತು 13 ಅಡಿ ಉದ್ದದ, ಅಂದಾಜು 15 ಕೆ.ಜಿ ಮತ್ತು 25 ಕೆ.ಜಿ.ಗೂ ಅಧಿಕ ಭಾರವಿದ್ದ ಹಾವುಗಳನ್ನು ಸೆರೆಹಿಡಿದರು. ನಂತರ ಶೀತಲ್ ಕುಂಬಳಚೇರಿ ಮತ್ತು ಅರಣ್ಯ ಸಿಬ್ಬಂದಿಗಳಾದ ಶಮಾ, ವಲಯ ಅರಣ್ಯಾಧಿಕಾರಿ ವಿಜೇಂದ್ರ ಕುಮಾರ್, ಪುನೀತ್ ಕೆ., ಜಗನ್ನಾಥ, ರಂಗನಾಥ ಬಿ., ನಾಗರಾಜ ಇವರುಗಳ ಸಹಕಾರದಿಂದ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.