ಮಡಿಕೇರಿ, ಡಿ. 12: ಇಂದು ನಸುಕಿನವೇಳೆ ದೇವಾಟ್ ಪರಂಬ್ ನರಮೇಧ ದುರಂತÀ ಸಮಾಧಿ ಸ್ಥಳದಲ್ಲಿ ಸಿ.ಎನ್.ಸಿ.ಯಿಂದ ಗೌರವಾಂಜಲಿ ಅರ್ಪಣೆ ಮಾಡಲಾಯಿತು. 233 ವರ್ಷಗಳ ಹಿಂದೆ 12.12.1785 ರಲ್ಲಿ ಮೈಸೂರಿನ ಆಕ್ರಮಣಕಾರ ಟಿಪ್ಪುವಿನಿಂದ ಮೋಸಕ್ಕೊಳಗಾಗಿ ಬಲಿಯಾದ ಕೊಡವ ದಿವ್ಯಾತ್ಮಗಳಿಗೆ ದೇವಾಟ್ ಪರಂಬ್ ನರಮೇಧ ಸ್ಥಳದಲ್ಲಿ ಗಣಹೋಮ-ಶಾಂತಿ ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ವಿಧಿವಿಧಾನವನ್ನು ಶಾಸ್ತ್ರೋಕ್ತವಾಗಿ ಶ್ರೀ ಪಾಡಿ ಇಗ್ಗುತ್ತಪ್ಪ ದೇವ ನೆಲೆಯ ಪ್ರಧಾನ ಅರ್ಚಕ ಕುಶ ಭಟ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಮಂಡಪಂಡ ಮನೋಜ್, ಆಲ್ಮಂಡ ಜಯ್, ಕಲಿಯಂಡ ಸುಬ್ಬಯ್ಯ, ಅರೆಯಡ ಗಿರೀಶ್, ಚಂಬಂಡ ಜನತ್, ಮೊಣ್ಣಂಡ ಕಾರ್ಯಪ್ಪ ಭಾಗವಹಿಸಿದ್ದರು.