ಪೊನ್ನಂಪೇಟೆ, ಡಿ. 12: ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಉಂಟಾದ ಅಪಾರ ನಷ್ಟ-ಕಷ್ಟಗಳನ್ನು ಮನಗಂಡ ಪೊನ್ನಂಪೇಟೆ ಸಮೀಪದ ಜೋಡುಬೀಟಿ ಕೊಡವ ಕೂಟದ ಸದಸ್ಯರು ಸಂತ್ರಸ್ತರ ನೆರವಿಗೆ ಚಿಂತಿಸಿದ್ದು, ಈ ನಿಟ್ಟಿನಲ್ಲಿ ತಮ್ಮ ಕೂಟದ ಸದಸ್ಯರುಗಳ ಸಹಕಾರದೊಂದಿಗೆ ಸಂಗ್ರಹಿಸಲಾದ ಒಟ್ಟು ರೂ. 45,900 ಹಣವನ್ನು ಕೂಟದ ಅಧ್ಯಕ್ಷ ಕಳ್ಳಿಚಂಡ ಸಿ.ಮುತ್ತಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಮೇಘತಾಳು, ಕಾಲೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೊಂದ ಐದು ಕುಟುಂಬಗಳನ್ನು ಆಯ್ಕೆ ಮಾಡಿ ಸಂಗ್ರಹವಾದ ಹಣವನ್ನು ಮಡಿಕೇರಿ ಕೊಡವ ಸಮಾಜದ ಆವರಣದಲ್ಲಿರುವ ‘ಕೊಡಗು ಸೇವಾ ಕೇಂದ್ರ' ದ ಸಹಕಾರದೊಂದಿಗೆ ವಿತರಿಸಲಾಯಿತು.
ಅವರ ಮುಂದಿನ ಜೀವನಕ್ಕೆ ಸ್ಪಂದಿಸುವ ಭರವಸೆಯನ್ನು ನೀಡಿದರು. ಮಡ್ಲಂಡ.ಡಿ ಪೂವಯ್ಯ, ಕನ್ನಿಕಂಡ ಬಿದ್ದಪ್ಪ, ಮುಕ್ಕಾಟಿರ.ಟಿ ಅಪ್ಪಣ್ಣ, ಚೆನ್ನಪಂಡ ನೀಲಮ್ಮ, ಹಾಗೂ ಪೋಷಕರನ್ನು ಕಳಕೊಂಡ ಇಂಜಿನಿಯರ್ ವಿದ್ಯಾರ್ಥಿ ಚೆನ್ನಪ್ಪಂಡ ಸಂಗಮ್ ಸುಬ್ರಮಣಿ ಅವರುಗಳಿಗೆ ನೆರವು ನೀಡಲಾಯಿತು.