ಮಡಿಕೇರಿ, ಡಿ.11: ‘ರೈಡ್ ಎ ಸೈಕಲ್’ ಪ್ರತಿಷ್ಠಾನದ 11ನೇ ಆವೃತ್ತಿಯ ಟೂರ್ ಆಫ್ ನೀಲಗಿರೀಸ್ ಕೊಡಗಿನ ಮೂಲಕ ಕೇರಳಕ್ಕೆ ಸಾಗಿದೆ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ ನೀಲಗಿರಿ ಶ್ರೇಣಿ ವ್ಯಾಪ್ತಿಯಲ್ಲಿ ತಾ. 16 ರವರೆಗೆ ಸಂಚರಿಸಲಿರುವ ಈ ಸೈಕಲ್ ಯಾತ್ರೆಯಲ್ಲಿ 13 ದೇಶಗಳಿಂದ 29 ಅಂತಾರಾಷ್ಟ್ರೀಯ ರೈಡರ್‍ಗಳು ಪಾಲ್ಗೊಂಡಿದ್ದು 18 ಮಹಿಳಾ ರೈಡರ್‍ಗಳೂ ಸೇರಿದಂತೆ 110 ಸೈಕ್ಲಿಸ್ಟ್ ಗಳು ಈ ವರ್ಷ ಭಾಗವಹಿಸಿದ್ದಾರೆ. ಟೂರ್ ಆಫ್ ನೀಲಗಿರೀಸ್ ನಿರ್ದೇಶಕ ಸತೀಶ್ ಬೆಳವಾಡಿ ಮತ್ತು ಸಹಾಯಕ ನಿರ್ದೇಶಕ ಬದ್ರಿನಾಥ್ ವಿ. ಶಾಸ್ತ್ರಿ ಮಾಹಿತಿ ನೀಡಿ, ಟೂರ್ ಆಫ್ ನೀಲಗಿರೀಸ್ 2018ರಲ್ಲಿ ಇದೇ ಮೊದಲ ಬಾರಿಗೆ ಸಕಲೇಶಪುರ - ಸೋಮವಾರಪೇಟೆ - ಕುಶಾಲನಗರ ಮಾರ್ಗದಲ್ಲಿ ಸೈಕಲಿಸ್ಟ್‍ಗಳು ಸಂಚರಿಸಿದ್ದು, ಕಾಫಿ ತೋಟ, ಗಿರಿಕಂದರಗಳ ನಡುವಿನ ಈ ಹೊಸ ಮಾರ್ಗ ಸಾಕಷ್ಟು ಸವಾಲಿನಿಂದ ಕೂಡಿತ್ತು ಎಂದು ಮಾಹಿತಿ ನೀಡಿದರು. ಟೂರ್ ಆಫ್ ನೀಲಗಿರೀಸ್ ಗುರುತಿಸಿರುವ ಈ ಹೊಸ ಮಾರ್ಗ ಸೈಕ್ಲಿಂಗ್ ಇತಿಹಾಸದಲ್ಲೇ ದಾಖಲೆ ಮಾಡಿದೆ ಎಂದೂ ಅವರು ಹೇಳಿದರು.

ಪ್ರಮುಖವಾಗಿ ಟೂರ್ ವರ್ಷದಿಂದ ವರ್ಷಕ್ಕೆ ಪ್ರತಿಭಾನ್ವಿತ ಭಾರತೀಯ ಸೈಕ್ಲಿಸ್ಟ್‍ಗಳಿಗೆ ತಮ್ಮ ಸಾಮಥ್ರ್ಯ ಪರೀಕ್ಷಿಸಿಕೊಳ್ಳಲು ವೇದಿಕೆ ಯಾಗಿದೆ. ಜತೆಗೆ ಅಂತಾರ್ರಾಷ್ಟ್ರೀಯ ಸೈಕ್ಲಿಸ್ಟ್‍ಗಳೊಂದಿಗೆ ಪೈಪೆÇೀಟಿ ನೀಡಲು ಕೌಶಲ್ಯವೃದ್ಧಿಗೆ ಇದು ನೆರವಾಗಿದೆ ಎಂದು ಸತೀಶ್ ಬೆಳವಾಡಿ ಹೇಳಿದರು.

ಬೆಂಗಳೂರಿನಿಂದ 20, ಪುಣೆಯಿಂದ 10, ಇಂದೋರ್‍ನಿಂದ 6, ಚೆನೈ ದಿಲ್ಲಿ, ಹೈದರಾಬಾದ್‍ನಿಂದ ತಲಾ ಮೂವರು, ಗೋವಾದಿಂದ ಇಬ್ಬರು, ಅಹಮದಾಬಾದ್, ಜೈಪುರ, ಕೋಲ್ಕತ್ತಾ, ದಿಲ್ಲಿ, ವೆಲ್ಲೂರು, ಚಂಡೀಗಡ್‍ನಿಂದ ಓರ್ವ ಸೈಕಲಿಸ್ಟ್ ಟೂರ್ ಆಫ್ ನೀಲಗಿರೀಸ್‍ನಲ್ಲಿ ಪಾಲ್ಗೊಂಡಿದ್ದಾರೆ. ಅಂತೆಯೇ, ಅಮೇರಿಕಾದಿಂದ ಐವರು, ಗ್ರೇಟ್ ಬ್ರಿಟನ್‍ನಿಂದ ಮೂವರು, ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಜರ್ಮನಿಯಿಂದ ತಲಾ ಇಬ್ಬರು, ಮಲೇಷ್ಯಾ, ಪೆÇಲೇಂಡ್, ನೆದರ್ಲೆಂಡ್, ಸ್ವೀಡನ್ ನಿಂದ ತಲಾ ಒಬ್ಬರು ವಿದೇಶಿ ಸೈಕಲಿಸ್ಟ್‍ಗಳು ಕೂಡ ಈ ಬಾರಿ ಪಾಲ್ಗೊಂಡಿದ್ದು ವಿಶೇಷ ಎಂದು ರೈಡ್ ಎ ಸೈಕಲ್ ಪ್ರತಿಷ್ಠಾನದ ಸಹಸಂಸ್ಥಾಪಕ ದೀಪಕ್ ಪಟೇಲ್ ಹೇಳಿದರು.

ಬೆಂಗಳೂರಿನ ಇಕ್ಷಾ ಪ್ರತಿಷ್ಠಾನದ ಸೈಕಲಿಸ್ಟ್ ತನ್ಮಯ ಬೆಕ್ಕಲಲೆ ಮಾತನಾಡಿ, ನವಜಾತ ಶಿಶು ಹಾಗೂ 5 ವರ್ಷಕಿಂತ ಕಡಿಮೆ ಇರುವ ಮಕ್ಕಳಲ್ಲಿ ಕಾಡುವ ಅಪಾಯಕಾರಿ ಕಣ್ಣಿನ ಕ್ಯಾನ್ಸರ್ ರೆಟಿನೋ ಬ್ಲಾಸ್ಟೋಮಾ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಈ ಬಾರಿಯ ಟೂರ್ ಆಫ್ ನೀಲಗಿರೀಸ್‍ನಲ್ಲಿ ತಾನು ಭಾಗವಹಿಸುತ್ತಿದ್ದು, ಎಷ್ಟೋ ಬಡ ಕುಟುಂಬಗಳಿಗೆ ಈ ರೋಗಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುವದಿಲ್ಲ. ಅಂತಹ ಬಡ

(ಮೊದಲ ಪುಟದಿಂದ) ಕುಟುಂಬದ ಮಕ್ಕಳಿಗೆ ನೆರವು ನೀಡುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.

ಟೂರ್ ಆಫ್ ನೀಲಗಿರೀಸ್‍ನಲ್ಲಿ ಪಾಲ್ಗೊಂಡಿರುವ ಭಾರತದ ಸೈಕ್ಲಿಂಗ್ ಚಾಂಪಿಯನ್ ಕಿರಣ್ ಕುಮಾರ್ ರಾಜು ಪ್ರಕಾರ, ಟೂರ್ ಆಫ್ ನೀಲಗಿರೀಸ್ ಅತ್ಯಂತ ರೋಮಾಂಚಕ, ಕಠಿಣ ಹಾದಿಯ ಸೈಕಲಿಂಗ್ ಆಗಿದ್ದು, ಹೀಗಾಗಿಯೇ ತಾನು ಸತತ 9ನೇ ವರ್ಷ ಈ ಸೈಕ್ಲಿಂಗ್ ಪಯಣದಲ್ಲಿ ಪಾಲ್ಗೊಳ್ಳುತ್ತಿರುವೆ. ಸೈಕಲಿಸ್ಟ್‍ನ ಸಾಮಥ್ರ್ಯದೊಂದಿಗೆ ಸೈಕಲ್‍ನ ಸಾಮಥ್ರ್ಯವನ್ನೂ ಪಶ್ಚಿಮಘಟ್ಟದ ಈ ಕಠಿಣ ಹಾದಿ ಪರೀಕ್ಷೆಗೊಡ್ಡುತ್ತದೆ ಎಂದು ಹೇಳಿದರು.

ಟೂರ್ ಆಫ್ ನೀಲಗಿರೀಸ್ ಸಂಚಾಲಕ ಶ್ರೀಧರ್ ಪಬ್ಬಶೆಟ್ಟಿ ಹೇಳುವಂತೆ, ಮುಂದಿನ ದಿನಗಳಲ್ಲಿ ರಾಜ್ಯದ ಅತ್ಯುತ್ತಮ ಸೈಕಲಿಂಗ್ ಮಾರ್ಗದ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ರಾಜ್ಯದಾದ್ಯಂತಲಿನ ಸೈಕಲಿಸ್ಟ್ ಗಳಿಗೆ ಸೈಕಲಿಂಗ್ ಬಗ್ಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲು ಸರ್ಕಾರದ ನೆರವನ್ನೂ ಕೋರಲಾಗುತ್ತದೆ. ಸೈಕಲಿಂಗ್‍ಗೆ ಯೋಗ್ಯ ರಸ್ತೆಗಳು ರಾಜ್ಯದಲ್ಲಿ ಅವಶ್ಯಕ ಎಂಬದನ್ನೂ ಸರ್ಕಾರಕ್ಕೆ ಮನದಟ್ಟು ಮಾಡಲು ಚಿಂತಿಸಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಅನೇಕ ಕಡೆ ಸೈಕಲ್ ಸಂಚಾರಿಗರ ಸಂಖ್ಯೆಯನ್ನು ಟೂರ್ ಆಫ್ ನೀಲಗಿರೀಸ್ ಹೆಚ್ಚಿಸಿದೆ. ಆರೋಗ್ಯಕ್ಕೂ ಒಳ್ಳೆಯದು, ಪರಿಸರಕ್ಕೂ ಒಳ್ಳೆಯದು ಎಂಬ ಸಂದೇಶವನ್ನು ಕೂಡ ಟೂರ್ ಆಫ್ ನೀಲಗಿರೀಸ್ ಸಾರುತ್ತಿದೆ.

ಕೊಡಗಿನ ಸುಂದರ ಪರಿಸರ, ಕಾಫಿ ತೋಟಗಳ ನಡುವೆ, ಕೊಡಗಿನ ಜನಜೀವನವನ್ನು ಗಮನಿಸುತ್ತಾ ಮಂಜು ಮುಸುಕಿದ ಹಾದಿಯಲ್ಲಿ 110 ಸೈಕಲಿಸ್ಟ್‍ಗಳು ಕುಶಾಲನಗರದಿಂದ ದುಬಾರೆ, ಸಿದ್ದಾಪುರ, ಗೋಣಿಕೊಪ್ಪ, ತೋಲ್ಪಟ್ಟಿ ಮೂಲಕ ಸುಲ್ತಾನ್ ಬತೇರಿಯತ್ತ ಸಾಗಿದರು.