ಕುಶಾಲನಗರ, ಡಿ. 10: ಕುಶಾಲನಗರ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಅಪರಿಚಿತ ವೃದ್ಧನೋ ರ್ವನ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಭಿಕ್ಷುಕನಂತೆ ಕಂಡುಬರುವ ಅಂದಾಜು 60 ವರ್ಷ ಪ್ರಾಯದ ವೃದ್ಧನ ಮೃತದೇಹ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈತನ ಪಕ್ಕದಲ್ಲಿ ಇಡ್ಲಿ, ಚಟ್ನಿ, ಬಾಟಲ್ ನೀರು ಪತ್ತೆಯಾಗಿದ್ದು, ಬೆಳಿಗ್ಗೆ ಆಹಾರ ಸೇವನೆ ಸಂದರ್ಭ ಮೃತಪಟ್ಟಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಯಾವದೇ ರೀತಿಯ ಮಾಹಿತಿ ಲಭಿಸಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.