ಮಡಿಕೇರಿ, ಡಿ. 10: ನಾದೋಪಾಸನೆಯಿಂದ ದೈವ ಸಾಕ್ಷ್ಷಾತ್ಕಾರ ಸಾಧ್ಯ ಎಂದು ಸಾಹಿತಿ ನಾಗೇಶ್ ಕಾಲೂರು ವಿಮರ್ಶಿಸಿದರು. ನಿನ್ನೆ ದಿನ ಇಲ್ಲಿನ ಶ್ರೀ ಆಂಜನೇಯ ದೇಗುಲದಲ್ಲಿ ಏರ್ಪಟ್ಟಿದ್ದ ಏಕಾಹ ಭಜನಾ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ದೇವರು ಬೇರೆಲ್ಲಿಯೂ ಇಲ್ಲ; ನಮ್ಮ ಹೃದಯದಲ್ಲಿಯೇ ಇದ್ದಾನೆ. ಆತನನ್ನು ಆಕಾರದ ಮೂಲಕ ಕಂಡುಕೊಳ್ಳುವದು ಭಾರತೀಯ ಸಂಸ್ಕøತಿಯಾಗಿದೆ.ಪ್ರ್ರಾಣಿ ಪಕ್ಷಿಗಳೂ ಕೂಡ ಸಂಗೀತದ ಉಲಿಗೆ ಮಾರು ಹೋಗುತ್ತವೆ. ನಾದ, ಲಯದ ಧ್ವನಿ ನೆಲಕ್ಕೆ ಮುಟ್ಟಿದಾಗ ಉಂಟಾಗುವ ಕಂಪನದಿಂದ ಹಾವುಗಳು ಕೂಡ ತಮ್ಮ ಚರ್ಮದ ಮೂಲಕ ನಾದÀವನ್ನು ಗ್ರಹಿಸುತ್ತವೆ ಎಂದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ ಎಂದು ನಾಗೇಶ್ ಮಾಹಿತಿಯಿತ್ತರು. ನಾದದ ಲಯವು ನಮ್ಮ ಉಸಿರಾಟದ ಮೇಲೆಯೂ ಪರಿಣಾಮ ಬೀರಿ ಶುದ್ಧೀಕರಿಸುತ್ತದೆ ಎಂದ ಅವರು ಕೊಡವ ವಾಲಗವು ಕೂಡ ಜನಾಕರ್ಷಣೀಯವಾಗಿ ನೃತ್ಯಕ್ಕೆ ಉತ್ತೇಜಿಸುವದೇ ಪ್ರತ್ಯಕ್ಷ ನಿದರ್ಶನವಾಗಿದೆ ಎಂದರು. ಭಕ್ತರು ಸಾಮೂಹಿಕವಾಗಿ ಭಗವನ್ನಾಮ ಸಂಕೀರ್ತನೆ ಮಾಡುವಾಗ ರಾಗ, ತಾಳ, ಲಯದ ಸಮ್ಮಿಳನದೊಂದಿಗೆ ಭಗವಂತನು ಒಲಿಯುತ್ತಾನೆ. ಭಗವಂತನೇ ಈ ಕುರಿತಾಗಿ ವಚನವಿತ್ತಿದ್ದಾನೆ ಎಂದು ನಾಗೇಶ್ ಕಾಲೂರು ಬಣ್ಣಿಸಿದರು.
ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ಉಪಸ್ಥಿತರಿದ್ದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಮಹೇಶ್ ಸ್ವಾಗತಿಸಿದರು. ಅಧಿಕ ಸಂಖ್ಯೆಯಲ್ಲಿ ನಿನ್ನೆ ರಾತ್ರಿವರೆಗೂ ಭಜನಾ ತಂಡದ ಸದಸ್ಯರು, ನಗರದ ಭಕ್ತ ಜನರು ಪಾಲ್ಗೊಂಡುದು ವಿಶೇಷವಾಗಿತ್ತು. ಭಜನಾ ತಂಡಗಳಿಂದ ಭಕ್ತಿ ಪೂರ್ಣ, ಭಾವ ಪೂರ್ಣ ಭಜನೆ ನಡೆಯಿತು. ಅರ್ಚಕ ಸಂತೋಶ್ ಭಟ್ ಅವರಿಂದ ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ವಿತರಣೆ ಏರ್ಪÀಡಿಸಲಾಗಿತ್ತು.