ಕುಶಾಲನಗರ, ಡಿ. 10: ಕುಶಾಲನಗರದ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ 5ನೇ ವರ್ಷದ ರಂಗೋಲಿ ಸ್ಪರ್ಧೆ ನಡೆಯಿತು.

ಪಟ್ಟಣದ ರಥಬೀದಿ ಯಲ್ಲಿ ಸಾರ್ವಜನಿಕ ಮಹಿಳೆಯರಿಗೆ ನಡೆದ ಸ್ಪರ್ಧೆಯನ್ನು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ ಉದ್ಘಾಟಿಸಿದರು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 75 ಮಂದಿ ಮಹಿಳೆಯರು ವಿವಿಧ ರೀತಿಯ ಚಿತ್ತಾರಗಳನ್ನು ರಚಿಸಿದರು. ಈ ಪೈಕಿ ಸೋಮವಾರ ಪೇಟೆಯ ಚಂದ್ರಕಲಾ ಪ್ರಥಮ ಸ್ಥಾನಗಳಿಸಿ ರೂ. 2,222 ನಗದು, 1 ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ಪಡೆದುಕೊಂಡರು. ಪುತ್ತೂರಿನ ಅಕ್ಷತಾ ಪ್ರವೀಣ ದ್ವಿತೀಯ ಸ್ಥಾನಗಳಿಸಿ ರು 1,111 ನಗದು ಅರ್ಧ ಗ್ರಾಂ ಚಿನ್ನದ ನಾಣ್ಯ ಪಡೆದುಕೊಂಡರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಈ ಸಂದರ್ಭ ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಎನ್.ನಾಗಪ್ರವೀಣ್, ನಿಕಟಪೂರ್ವ ಅಧ್ಯಕ್ಷ ವಿ.ಆರ್.ಮಂಜುನಾಥ್, ಉಪಾಧ್ಯಕ್ಷ ವೈಶಾಖ್, ಪ್ರವೀಣ್, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಉದ್ಯಮಿಗಳಾದ ಎಸ್.ಕೆ.ಸತೀಶ್, ಉಮಾಶಂಕರ್, ವಿಶ್ವನಾಥನ್, ವಿ.ವಿ.ತಿಲಕ್, ಪಪಂ ಸದಸ್ಯ ಅಮೃತ್‍ರಾಜ್, ಆರ್ಯವೈಶ್ಯ ಮಹಾಸಭಾ ನಿರ್ದೇಶಕರಾದ ಎಸ್.ಎನ್.ನರಸಿಂಹಮೂರ್ತಿ, ಕಾರ್ಯಕ್ರಮ ನಿರ್ದೇಶಕ ವಿ.ಜೆ.ಬಾಲಾಜಿ ಮತ್ತಿತರರು ಇದ್ದರು. ಲಕ್ಷ್ಮಿ, ಆಶಾ ಸತೀಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳು ಕೂಡ ಪಾಲ್ಗೊಂಡು ರಂಗೋಲಿ ಬಿಡಿಸಿದರು. ಕಲಾವಿದ ಆರ್.ಎಸ್.ರಾಜೇಶ್ ಅವರಿಗೆ ವಾಸವಿ ಯುವಜನ ಸಂಘದಿಂದ ಕಾವೇರಿ ಕಲಾ ಕೇಸರಿ ಬಿರುದು ನೀಡಿ ಗೌರವಿಸಲಾಯಿತು.