ಮಡಿಕೇರಿ, ಡಿ. 10: ಭಾಗಮಂಡಲ-ತಲಕಾವೇರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿನ ಜಿಲ್ಲಾ ದಂಡಾಧಿಕಾರಿ ಸಮ್ಮುಖ ನಡೆಸಲಾದ ವಿಚಾರಣೆಯ ತೀರ್ಪು ನಿರೀಕ್ಷೆಯಂತೆ ಇಂದು ಹೊರ ಬೀಳದೆ ಮುಂದೂಡಲ್ಪಟ್ಟಿದೆ. ಈ ಸಂಬಂಧ ಎಂ.ಬಿ. ದೇವಯ್ಯ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ವ್ಯಾಜ್ಯದ ವಿಚಾರಣೆಯನ್ನು ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ನಿರ್ದೇಶನ ಲಭಿಸಿತ್ತು. ಆ ಮೇರೆಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ವಿಚಾರಣೆ ನಡೆಸಿ ವಾದಿ-ಪ್ರತಿವಾದಿಗಳ ಹೇಳಿಕೆಯೊಂದಿಗೆ ತೀರ್ಪನ್ನು ಕಾಯ್ದಿರಿಸಿದ್ದಾರೆ.