ಗೋಣಿಕೊಪ್ಪ ವರದಿ, ಡಿ. 10: ಚೌಡಿಕಟ್ಟೆಯಲ್ಲಿ ಕರುವಿನ ಮೇಲೆ ಧಾಳಿ ನಡೆಸಿರುವ ಹುಲಿ ಕರುವನ್ನು ಸಂಪೂರ್ಣವಾಗಿ ತಿಂದುಹಾಕಿದೆ.

ತಿತಿಮತಿ ಸಮೀಪದ ಮತ್ತಿಗೋಡು ವನ್ಯಜೀವಿ ವಲಯ ಅರಣ್ಯದ ಸಮೀಪವಿರುವ ಚೌಡಿಕಟ್ಟೆ ನಿವಾಸಿ ಬೋಜ ಎಂಬವರಿಗೆ ಸೇರಿದ 5 ದಿನದ ಕರುವಿನ ಮೇಲೆ ಕಳೆದ ರಾತ್ರಿ ಧಾಳಿ ನಡೆಸಿದೆ. ಕೊಟ್ಟಿಗೆಯಲ್ಲಿದ್ದ ಕರುವನ್ನು ಕೊಂದು ಹಾಕಿ ಸಂಪೂರ್ಣವಾಗಿ ತಿಂದು ಹಾಕಿದೆ. ಸ್ಥಳಕ್ಕೆ ಮತ್ತಿಗೋಡು ವನ್ಯಜೀವಿ ವಲಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.

- ಸುದ್ದಿಪುತ್ರ