ಒಡೆಯನಪುರ, ಡಿ. 9: ಸಮೀಪದ ಹೊಸೂರು ಗ್ರಾಮದ ಪುರಾಣ ಪ್ರಸಿದ್ಧ ಬೆಟ್ಟದ ಶ್ರೀ ಬಸವೇಶ್ವರ ಸ್ವಾಮಿಯ ಕೌಟೆಕಾಯಿ ಜಾತ್ರಾ ಮಹೋತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಮೂಹ ನೃತ್ಯ ಕಾರ್ಯಕ್ರಮ ತಾ. 10 ರಂದು ನಡೆಸಲಾಗುವದೆಂದು ಶ್ರೀ ಬೆಟ್ಟದ ಬಸವೇಶ್ವರ ದೇವಾಲಯ ಆಡಳಿತ ಮಂಡಳಿ ಮತ್ತು ಹೊಸೂರು ಗ್ರಾಮದ ಬಸವೇಶ್ವರ ಜೆ.ಸಿ.ಐ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಹೊಸೂರು ಬಸವೇಶ್ವರ ಜೆ.ಸಿ.ಐ ಸ್ಥಾಪನಾ ಅಧ್ಯಕ್ಷ ಎಚ್.ಕೆ. ರಮೇಶ್ ಮತ್ತು ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಸ್. ಶಾಂತಮಲ್ಲಪ್ಪ ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ಹೊಸೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದವಾದ ಶ್ರೀ ಬೆಟ್ಟದ ಬಸವೇಶ್ವರ ಸ್ವಾಮಿಯ ಕೌಟೆಕಾಯಿ ಜಾತ್ರೆಯನ್ನು ಹಲವಾರು ವರ್ಷಗಳಿಂದ ನಡೆಸಲಾಗುತ್ತಿದೆ, ಗ್ರಾಮದ ಶ್ರೀ ಬೆಟ್ಟದ ಬಸವೇಶ್ವರ ದೇವಾಲಯ ಸಮಿತಿ ಮತ್ತು ಬಸವೇಶ್ವರ ಜೆ.ಸಿ.ಐ ಸಂಸ್ಥೆ, ಗ್ರಾಮಸ್ಥರು ಹಾಗೂ ಹೊರ ಊರಿನ ದಾನಿಗಳ ಸಹಕಾರದೊಂದಿಗೆ ಕೌಟೆಕಾಯಿ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತಿದೆ ಎಂದರು. ತಾ.10 ರ ಸೋಮವಾರ ದಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಬೆಟ್ಟದ ಬಸವೇಶ್ವರ ದೇವಾಸ್ತಾನದ ಸನ್ನಿಧಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವ ಆರಂಭಗೊಳುತ್ತದೆ, ಜಾತ್ರಾ ಮಹೋತ್ಸವದ ಅಂಗವಾಗಿ ಸಾಧಕರನ್ನು ಸನ್ಮಾನಿಸಲಾಗುವದು ಮತ್ತು ಸಮೂಹ ನೃತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುತ್ತದೆ ಎಂದರು. ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯ ಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಿಲಾನಂದ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದು, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥಸ್ವಾಮೀಜಿ ಆಶೀರ್ವಚಿಸುತ್ತಾರೆ, ಕಾಸರಗೋಡು ಕುಂಠಾರು ಕ್ಷೇತ್ರದ ರವೀಂದ್ರ ತಂತ್ರಿ ಧಾರ್ಮಿಕ ಪ್ರವಚನ ಮಾಡಲಿರುವರು, ಕಾರ್ಯಕ್ರಮದಲ್ಲಿ ಹಾಸನದ ಅಪರ ಅಧೀಕ್ಷಕಿ ನಂದಿತ, ಕೌಕೋಡಿ ಎಸ್ಟೇಟ್ ವ್ಯವಸ್ಥಾಪಕ ಅರುಣ್ ಭಾವೆ, ಬೆಂಗಳೂರಿನ ಉದ್ಯಮಿ ಶೇಖರ್, ಪತ್ರಕರ್ತ ಸುರೇಶ್ ಒಡೆಯನಪುರ ಮುಂತಾದವರು ಭಾಗವಹಿಸುತ್ತಾರೆ ಎಂದರು. ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಲಯ ಸಮಿತಿ ವತಿಯಿಂದ ಬೆಂಗಳೂರಿನ ಉದ್ಯಮಿ ಶಿವಕುಮಾರ್ ಜಾಗಟೆ, ಹಾಸನದ ನಾಡ ಸಹ್ಯಾದ್ರಿ ಪತ್ರಿಕೆ ಸಂಪಾದಕ ಗೋಪಾಲ್ ಬಾಳ್ಳು ಮತ್ತು ಹಾಸನದ ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯದ ಉಪನ್ಯಾಸಕ ಡಾ. ಯೋಗೇಂದ್ರ ಅವರುಗಳನ್ನು ಸನ್ಮಾನಿಸಲಾಗುತ್ತದೆ ಎಂದರು.

ಜಾತ್ರಾ ಮಹೋತ್ಸವದ ಅಂಗವಾಗಿ ಮದ್ಯಾಹ್ನ 12 ಗಂಟೆಗೆ ಅಂತರ್ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಸಮೂಹ ನೃತ್ಯ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಪ್ರಾಥಮಿಕ, ಪ್ರೌಢಶಾಲೆ ಶಾಲೆ, ಪಿಯುಸಿ ಮೇಲ್ಪಟ್ಟ ಕಾಲೇಜು ವಿಭಾಗಗಳ ವಿದ್ಯಾರ್ಥಿಗಳು ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು, ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದರು. ಮಾಹಿತಿ ಗಾಗಿ ಎಚ್.ಕೆ. ರಮೇಶ್ -9480099004 ಮತ್ತು ಅಶ್ವಥ್-9482654323 ಸಂಪರ್ಕಿಸಲು ಕೋರಿದ್ದಾರೆ.

-ವಿ.ಸಿ.ಸುರೇಶ್ ಒಡೆಯನಪುರ