ಕೂಡಿಗೆ, ಡಿ. 9: ಕುಶಾಲನಗರ ರೈತ ಸಂಪರ್ಕ ಕೇಂದ್ರದ ವತಿಯಿಂದ ಹೋಬಳಿ ವ್ಯಾಪ್ತಿಯ ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ ನಡೆಸಲಾಗುತ್ತದೆ. ರೈತ ಸಂಪರ್ಕ ಕೇಂದ್ರ ಅಧಿಕಾರಿ ವರ್ಗದವರು ರೈತರು ಬೆಳೆದಿರುವ ಜಮೀನಿಗೆ ತೆರಳಿ ಅ ಪ್ರದೇಶದಲ್ಲಿ ಬೆಳೆಯನ್ನು ಸಮೀಕ್ಷೆಯ ಮೂಲಕ ರೈತರಿಗೆ ತಿಳಿಸಲಾಗುತ್ತದೆ. ಇದರಿಂದ ಅಯಾ ಭಾಗದ ರೈತರು ತಮ್ಮ ಇಳುವರಿ ಅಧಾರದ ಮೇಲೆ, ವಾತಾವರಣ ಅನುಕೂಲವಾಗುವಂತೆ ಬೇಸಾಯ ಮಾಡಲು ಸಹಕಾರವಾಗುವದು. ಕೃಷಿ ಇಲಾಖೆಯ ವತಿಯಿಂದ ಗ್ರಾಮಗಳಿಗೆ ತೆರಳಿ ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕುಶಾಲನಗರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.