ಮಡಿಕೇರಿ, ಡಿ. 9: ಕಡಂಗ ಕೊಕ್ಕಂಡ ಬಾಣೆ ದರ್ಗಾ ಶರೀಫಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಫೆಬ್ರವರಿ 15 ರಿಂದ 19 ರವರೆಗೆ ನಡೆಸಲಾಗುವದು.

ಕಾರ್ಯಕ್ರಮದಲ್ಲಿ ಹಲವು ಉಲಮಾ, ಉಮರಾ ನೇತಾರರು ಭಾಗವಹಿಸಲಿದ್ದಾರೆ. ತಾ. 15.2.2019 ರಂದು ಜಮಾಅತ್ ಅಧ್ಯಕ್ಷ ಕೆ.ಎ. ಇಬ್ರಾಹಿಂ ಅವರು ಧ್ವಜಾರೋಹಣ ಮಾಡಲಿದ್ದಾರೆ. ಈ ಅವಧಿಯಲ್ಲಿ ಪಾಣಕ್ಕಾಡ್ ರಶೀದಲಿ ಶಿಹಾಬ್ ತಂಙಳ್, ಮುಹೌಯುದ್ದೀನ್ ಫೈಝಿ ಎಡಪಾಲ, ಸಯ್ಯದ್ ಮುಹಮ್ಮದ್ ಅಬ್ದುಲ್ ಹಕೀಂ ತಯ್ಯಿಬ್ ಜಮಲು ಲ್ಲೈಲಿ ಕಡಲುಂಡಿ (ಖತೀಬ್ ಬದ್ರಿಯ ಮಸೀದಿ ಕಡಂಗ), ಅಶ್ರಫ್ ರಹ್ಮಾನಿ ಚೌಕಿ ಕಾಸರಗೋಡು, ಕುಮ್ಮನಂ ನಿಝಾಮುದ್ದೀನ್ ಅಝ್‍ಹರಿ, ಅಬ್ದುಲ್ ಫೈಝಿ ಎಡಪಾಲ ಅವರುಗಳು ಪಾಲ್ಗೊಂಡು ಪ್ರವಚನ ನೀಡಲಿದ್ದಾರೆ.

ತಾ. 18 ಮತ್ತು 19 ರಂದು ಅನ್ನದಾನ ನಡೆಯಲಿದೆ. ದಿಕ್ರೌ ಹಲ್ಕಾ, ಸ್ವಲಾತ್ ಮಜಾಲಿಸ್, ಬುರ್ದಾ ಆಲಾಪನೆ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮಗಳನ್ನು ನಡೆಸಲಾಗುವದು ಎಂದು ಕಾರ್ಯದರ್ಶಿ ಸಿ.ಹೆಚ್. ಮಮ್ಮು ತಿಳಿಸಿದ್ದಾರೆ.