ಸೋಮವಾರಪೇಟೆ, ಡಿ. 7: ಇಲ್ಲಿನ ರೋಟರಿ ಕ್ಲಬ್ ಸೋಮವಾರಪೇಟೆ ಹಿಲ್ಸ್ ವತಿಯಿಂದ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಲಯ ಮಟ್ಟದ ರೋಟರಿ ಜಿಲ್ಲಾ ಕುಟುಂಬಗಳ ಕಲಾ ಸಂಗಮ-2018ರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಲಾ ಸಂಗಮದಲ್ಲಿ ಭಾಗಿಯಾಗಿದ್ದ ನಾಲ್ಕು ಜಿಲ್ಲೆಗಳ ರೋಟರಿ ಸದಸ್ಯರುಗಳು ತಮ್ಮ ಕಲಾ ಪ್ರತಿಭೆಗಳನ್ನು ಒರೆಗೆ ಹಚ್ಚಿದರು. ಗೀತೆಗಾಯನ, ಗುಂಪು ಗಾಯನ, ಮೂಕ ಪಾತ್ರಾಭಿನಯ, ನಾಟಕ ಸ್ಪರ್ಧೆಗಳಲ್ಲಿ ವೃತ್ತಿಪರ ಕಲಾವಿದರಂತೆ ತಮ್ಮನ್ನು ತೊಡಗಿಸಿಕೊಂಡು, ಬಹುಮಾನಕ್ಕೆ ಭಾಜನರಾದರು.

ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್, ರೋಟರಿ ಸೋಮವಾರಪೇಟೆ ಹಿಲ್ಸ್ ಅಧ್ಯಕ್ಷ ಪಿ.ಕೆ. ರವಿ, ಜಿಲ್ಲಾ ಡಿಜಿಇ ಜೋಸೆಫ್ ಮ್ಯಾಥ್ಯೂ, ವಲಯ ಕಾರ್ಯದರ್ಶಿ ಕ್ರಜ್ವಲ್ ಕೋಟ್ಸ್, ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ, ಸಾಂಸ್ಕøತಿಕ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್‍ಕುಮಾರ್ ನಲ್ವಾಡೆ, ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಸುಂದರ್, ಸಂತೋಷ್ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಪಿ. ನಾಗೇಶ್, ಸಾಂಸ್ಕøತಿಕ ಸಮಿತಿಯ ತಾಲೂಕು ಘಟಕದ ಕಾರ್ಯದರ್ಶಿ ಎಸ್.ಎ. ಮುರಳೀಧರ್ ಅವರುಗಳು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.

ರೋಟರಿ ಸದಸ್ಯರು ಮತ್ತು ಕುಟುಂಬದವರಿಗೆ ಆಯೋಜಿಸಿದ್ದ ಗಾಯನ ಸ್ಪರ್ಧೆಯ 14 ವರ್ಷ ಒಳಗಿನ ವಿಭಾಗದಲ್ಲಿ ಮಂಗಳೂರಿನ ಡೌನ್ ಟೌನ್ ಕ್ಲಬ್‍ನ ಶ್ರೇಯಾ ಭಂಡಾರಿ ಪ್ರಥಮ, ಸೋಮವಾರ ಪೇಟೆ ಹಿಲ್ಸ್‍ನ ತಾನ್ಯ ಮುರಳೀಧರ್ ದ್ವಿತೀಯ, 14 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಿಸ್ಟಿ ಹಿಲ್ಸ್ ಮಡಿಕೇರಿಯ ಶಮಿಕ್ ರಾಯ್ ಪ್ರಥಮ, ಪುರುಷರ ವಿಭಾಗದಲ್ಲಿ ಮಂಗಳೂರಿನ ಹಿಲ್‍ಸೈಡ್‍ನ ಉಮಾಕಾಂತ್ ನಾಯಕ್ ಪ್ರಥಮ, ಮಡಿಕೇರಿಯ ಶ್ರೀಹರಿ ರಾವ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಪುತ್ತೂರು ಯುವ ಕ್ಲಬ್‍ನ ಸಂಗೀತ ಕಾಮತ್ ಹಾಗೂ ಗೋಣಿಕೊಪ್ಪದ ವಿದ್ಯಾ ನಾರಾಯಣ್ ಪ್ರಥಮ, ಗೋಣಿಕೊಪ್ಪದ ಸುಮಿ ಸುಬ್ಬಯ್ಯ ದ್ವಿತೀಯ ಸ್ಥಾನ ಗಳಿಸಿದರು.

ಡುಯೆಟ್ ಸಾಂಗ್ ವಿಭಾಗದಲ್ಲಿ ಮಂಗಳೂರಿನ ಪ್ರಮೀಳಾ-ಅನಿಲ್ ಬಾಳಿಗ ಪ್ರಥಮ, ಪುತ್ತೂರಿನ ದತ್ತಾತ್ರೇಯ ರಾವ್-ಶ್ರೀಲಿಕ ದ್ವಿತೀಯ ಸ್ಥಾನ ಪಡೆದರೆ, ಸಮೂಹ ಗೀತೆಯಲ್ಲಿ ಗೋಣಿಕೊಪ್ಪ ಕ್ಲಬ್ ಪ್ರಥಮ ಸ್ಥಾನ ಪಡೆಯಿತು.

ಗುಂಪು ನೃತ್ಯ ಸ್ಪರ್ಧೆಯ 14 ವರ್ಷ ಒಳಗಿನವರ ವಿಭಾಗದಲ್ಲಿ ಗೋಣಿಕೊಪ್ಪ ಕ್ಲಬ್ ಪ್ರಥಮ, 14 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಬಜ್ಪೆ ಕ್ಲಬ್ ಪ್ರಥಮ, ಮಂಗಳೂರು ಸೌತ್ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ಮಂಗಳೂರು ಸೌತ್ ಪ್ರಥಮ, ಸೋಮವಾರಪೇಟೆ ಕ್ಲಬ್ ದ್ವಿತೀಯ ಸ್ಥಾನ ಗಳಿಸಿತು.

ನಾಟಕ ಸ್ಪರ್ಧೆಯಲ್ಲಿ ಪುತ್ತೂರು ಕ್ಲಬ್ ಪ್ರಥಮ, ಮಂಗಳೂರು ಸೌತ್ ದ್ವಿತೀಯ, ಮೂಕಾಭಿನಯ ಸ್ಪರ್ಧೆಯಲ್ಲಿ ಕುಶಾಲನಗರ ರೋಟರಿ ತಂಡ ಪ್ರಥಮ, ಪುತ್ತೂರು ತಂಡ ದ್ವಿತೀಯ ಸ್ಥಾನಗಳಿಸಿತು.