ವೀರಾಜಪೇಟೆ, ಡಿ. 7: ಚಿಕ್ಕಮಗಳೂರಿನಲ್ಲಿ ಚಂದ್ರಪುರ, ಚೆಟ್ನಳ್ಳಿ , ಕುಮಾರಗೋಡುವಿನಲ್ಲಿ ನ. 30 ರಿಂದ ತಾ. 2 ರವರಗೆ ನಡೆದ ಕಾಫಿ ಡೇ ಇಂಡಿಯನ್ ನ್ಯಾಷನಲ್ ರ್ಯಾಲಿಯ ಮೂರು ದಿನ ಕಾರ್ ರ್ಯಾಲಿಯಲ್ಲಿ ಕೊಡಗಿವರು ಭಾಗವಹಿಸಿ ಪಾರುಪತ್ಯ ಮೆರೆದಿದ್ದಾರೆ. ಇದರಲ್ಲಿ ಕೊಂಗೇಟಿರ ಚಾಲಕ ಬೋಪಯ್ಯ ಚೆಟ್ಟಳ್ಳಿ ಮತ್ತು ಸಹ ಚಾಲಕ ಗಗನ್ ಕರುಂಬಯ್ಯ ಅಮ್ಮತ್ತಿ ಇವರು ರ್ಯಾಲಿಯ ಒಟ್ಟಾರೆ ಚಾಂಪಿಯನ್ ಆಗಿ ಮೂರನೇ ಸ್ಥಾನ ಪಡೆದಿದ್ದಾರೆ. ಇದೇ ರ್ಯಾಲಿಯ 4 ಡಬ್ಲ್ಯುಡಿ ವಿಭಾಗದಲಿ ಚಾಲಕ ಸಚಿನ್ ಮೂರ್ತಿ ಸೋಮವಾರಪೇಟೆ ಮತ್ತು ಸಹ ಚಾಲಕ ಸತ್ಯಪಾಲ್ ಸೋಮವಾರಪೇಟೆ ದ್ವಿತೀಯ ಸ್ಥಾನ ಹಾಗೂ ಚಾಲಕ ಅವಿನ್ ನಂಜಪ್ಪ ಗೋಣಿಕೊಪ್ಪ ಮತ್ತು ಸಹ ಚಾಲಕ ಸೂರಜ್ ಶೆಟ್ಟಿ ಬೆಂಗಳೂರು ಇವರು ಮೂರನೇ ಸ್ಥಾನ ಪಡೆದಿದ್ದಾರೆ.
ಇದೇ ರ್ಯಾಲಿಯ ಐ.ಎನ್.ಆರ್.ಸಿ ವಿಭಾಗದ ಒಂದನೇ ಅರ್ಹತಾ ಸುತ್ತಿನ ವಿಭಾಗದಲ್ಲಿ ಚಾಲಕ ಸಣ್ಣವಂಡ ಗಣಪತಿ ಗೋಣಿಕೊಪ್ಪ ಮತ್ತು ಸಹ ಚಾಲಕ ವೇಣು ರಮೇಶ್ ಕುಮಾರ್ 3 ನೇ ಸ್ಥಾನ ಪಡೆದಿದ್ದಾರೆ. ಇದೇ ವಿಭಾಗದ 2 ನೇ ಅರ್ಹತ ಸುತ್ತಿನ ವಿಭಾಗದಲ್ಲಿ ಚಾಲಕ ಕೊಂಗೇಟಿರ ಬೋಪಯ್ಯ ಮತ್ತು ಸಹ ಸಂಚಾಲಕ ಗಗನ್ ಕರುಂಬಯ್ಯ ಅಮ್ಮತ್ತಿ ಇವರು 2 ನೇ ಸ್ಥಾನ ಗಳಿಸಿದ್ದಾರೆ ಇದೇ ವಿಭಾಗದಲ್ಲಿ 3 ನೇ ಅರ್ಹತ ವಿಭಾಗದಲ್ಲಿ ಚಾಲಕ ಸುಹೇನ್ ಗಣಪತಿ ಮತ್ತು ಸಹ ಚಾಲಕ ಜೀವ ಬೆಂಗಳೂರು ಇವರು ಎರಡು ದಿನ ಉತ್ತಮ ಸಾಧನೆಯೊಂದಿಗೆ ಮುನ್ನಡೆಯಲ್ಲಿದ್ದರು. ಸಹ ವಾಹನದ ತಾಂತ್ರಿಕ ತೊಂದರೆ ಕಾರಣ ನಿಗದಿತ ಸಮಯದೊಳಗೆ ರ್ಯಾಲಿ ಪೂರ್ತಿ ಗೊಳಿಸಲು ಸಾಧ್ಯವಾಗದೆ ಪಂದ್ಯದಿಂದ ಹೊರ ಉಳಿದರು. ಚಾಲಕನಾಗಿ ಲಾನು ನಾಗಲ್ಯಾಂಡ್ ಮತ್ತು ಸಹ ಚಾಲಕನಾಗಿ ಅಮೃತ್ ತಿಮ್ಮಯ್ಯ ಕಕ್ಕಬೆ ಇವರು ಸಹ ಇದೇ ರ್ಯಾಲಿಯ ಎಫ್.ಎಂ.ಎಸ್.ಸಿ.ಐ ಕಪ್ನಲ್ಲಿ ಭಾಗವಹಿಸಿದ್ದು ಇವರು ಸಹ ವಾಹನ ತಾಂತ್ರಿಕ ತೊಂದರೆ ಕಾರಣ ಪಂದ್ಯದಿಂದ ಹೊರ ಉಳಿಯಬೇಕಾಯಿತು.
ಈ ಎಲ್ಲರು ಈ ರ್ಯಾಲಿಯಲ್ಲಿ ಟೆನ್ ಚಾಂಪಿಯನ್ ವಿಜಯವಾಡ ತಂಡವನ್ನು ಪ್ರತಿನಿಧಿಸಿದ್ದರು. ಇದರಲ್ಲಿ ದೇಶದ ವಿವಿಧ ಕಡೆಯಿಂದ ಬಂದ 49 ಸ್ವರ್ಧಿಗಳು ಭಾಗವಹಿಸಿದ್ದಾಗಿ ಅಮ್ಮತ್ತಿಯ ರ್ಯಾಲಿಪಟು ತಿಮ್ಮಣ್ಣ ಮಾಹಿತಿ ನೀಡಿದ್ದಾರೆ. - ರಜಿತಾ ಕಾರ್ಯಪ್ಪ