ಸೋಮವಾರಪೇಟೆ, ಡಿ.8: ಜಿಲ್ಲಾ ಕಸಾಪ, ಸೋಮವಾರಪೇಟೆ ತಾಲೂಕು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕಿರಿಕೊಡ್ಲಿ ಮಠದ ಎಸ್‍ಜಿಎಸ್ ವಿದ್ಯಾಪೀಠ ಇವುಗಳ ವತಿಯಿಂದ ಕೊಡಗಿನ ಗಡಿ ಬೀಡು, ಮಠಗಳ ನಾಡಾದ ಕೊಡ್ಲಿಪೇಟೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ 2ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಅಕ್ಷರಶಃ ಮಕ್ಕಳ ಕನ್ನಡ ಹಬ್ಬವಾಗಿ ಮೇಳೈಸಿತು.

ಕಲ್ಲುಮಠ, ಕಿರಿಕೊಡ್ಲಿ ಮಠ ಮತ್ತು ಕಲ್ಲಳ್ಳಿ ಮಠಗಳಿರುವ ನಾಡು, ಕಾವೇರಿ ನೆಲ ಕೊಡಗು ಹಾಗೂ ಹೇಮಾವತಿ ಯ ಒಡಲು ಹಾಸನ ಜಿಲ್ಲೆಗಳ ಗಡಿಯನ್ನು ಹಂಚಿಕೊಂಡಿ ರುವ ಕೊಡ್ಲಿಪೇಟೆಯ ಪುಟ್ಟ ಪಟ್ಟಣದಲ್ಲಿ ಕನ್ನಡ ನಾಡಿನ ಮಕ್ಕಳಿಂದ ನಡೆದ ಕಣ್ಮನ ಸೆಳೆಯುವ ಮೆರವಣಿಗೆ ಅತ್ಯಾಕರ್ಷಕವಾಗಿತ್ತು. ಮೆರವಣಿಗೆ ಯಲ್ಲಿ ಕನ್ನಡ ನಾಡು, ನುಡಿ, ಸಾಂಸ್ಕøತಿಕ ವೈಭವ, ಕನ್ನಡ ನಾಡಿನ ಸಾಧಕ ದಿಗ್ಗಜರು, ಸಂಸ್ಕøತಿಯ ಹಿರಿಮೆಯನ್ನು ಸಾರುವ ಸ್ತಬ್ಧಚಿತ್ರಗಳು, ವೇಷಧಾರಿಗಳು ಎಲ್ಲರ ಗಮನ ಸೆಳೆದರು.

ಕೊಡ್ಲಿಪೇಟೆಯ ಹೊಸಮುನ್ಸಿ ಪಾಲಿಟಿ ಶ್ರೀ ಗಣಪತಿ ದೇವಾಲಯ ದಿಂದ ಪ್ರಾರಂಭಗೊಂಡ ಸಾವಿರಾರು ವಿದ್ಯಾರ್ಥಿಗಳು, ಕನ್ನಡಾಭಿ ಮಾನಿಗಳ ಸಹಿತ ಸ್ತಬ್ಧಚಿತ್ರಗಳನ್ನು ಒಳಗೊಂಡ ಮೆರವಣಿಗೆ, ಸಮ್ಮೇಳನ ನಡೆಯುವ ಎಸ್‍ಜಿಎಸ್ ವಿದ್ಯಾಪೀಠ ದಲ್ಲಿ ಸಮಾಪನಗೊಂಡಿತು.

ಕರುನಾಡಿನ ಸಾಂಸ್ಕøತಿಕ ರಾಯಭಾರಿಗಳನ್ನು ಪರಿಚಯಿಸುವ ವೇಷಧಾರಿಗಳಾಗಿ ಕಲ್ಲುಮಠದ ಶಾಲೆಯ ವಿದ್ಯಾರ್ಥಿಗಳು ಗಮನ ಸೆಳೆದರೆ, ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಗೆ ಆಯ್ಕೆಯಾಗಿ, ಪ್ರಶಸ್ತಿ ಪಡೆದ ಜಿಲ್ಲೆಯ ಏಕೈಕ ಶಾಲೆ ಎಂಬ ಗರಿ ಮೂಡಿಸಿಕೊಂಡಿರುವ ಬೆಸೂರು ಸರ್ಕಾರಿ ಪ್ರೌಢಶಾಲೆಯಿಂದ ಆಗಮಿಸಿದ 3 ಸ್ತಬ್ಧಚಿತ್ರಗಳು ಕನ್ನಡಾಭಿಮಾನಿಗಳ ಮನಗೆದ್ದಿತು.

ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮೂಡಿಬಂದ ‘ಅನುಭವ ಮಂಟಪ’, ಕೊಡ್ಲಿಪೇಟೆ ಜಿಎಂಪಿ ಶಾಲಾ ಮಕ್ಕಳ ‘ಕರುನಾಡ ಸಿರಿ’ ಸಾರುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ತಮ್ಮ ಛಾಪು ಮೂಡಿಸಿದವು.

ಕಲ್ಲುಮಠದ ಎಸ್‍ಕೆಎಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ಸಾಧಕರ ವೇಷಭೂಷಣ ದೊಂದಿಗೆ ಗಮನ ಸೆಳೆದರೆ, ಕಿರಿಕೊಡ್ಲಿ ಮಠದ ಗುರುಸಿದ್ಧಸ್ವಾಮಿ ವಿದ್ಯಾಪೀಠದ ಮಕ್ಕಳು ವೀರಗಾಸೆ ಸಹಿತ ಕನ್ನಡ ನಾಡಿನ ವಿವಿಧ ಕಲಾಪ್ರಾಕಾರಗಳನ್ನು ಪರಿಚಯಿಸಿದರು. ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕನ್ನಡಾಭಿಮಾನಿ ವರಪ್ರಸಾದ್ ಅವರು ಕನ್ನಡ ತೇರನ್ನು ಮೆರವಣಿಗೆಯಲ್ಲಿ ಅಳವಡಿಸಿದ್ದರು.

ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಬಸವಣ್ಣ ಅವರ ಅನುಭವ ಮಂಟಪವನ್ನು ಜನತೆಗೆ ಪರಿಚಯಿಸಿದರೆ, ಕಿರಿಕೊಡ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ‘ಕಂದ ಕಲಿತರೆ ಕನ್ನಡವ.., ಎಂದೆಂದಿಗೂ ನೀ ಮುನ್ನಡೆವೆ’ ಎಂಬ ಜಾಗೃತಿ ಘೋಷದೊಂದಿಗೆ ಸಾರ್ವಜನಿಕರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಬೆಸೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಹೆಣ್ಣು ತಾಯಿಯಾಗಿ, ರೈತ ಮಹಿಳೆಯಾಗಿ, ಸೈನಿಕರಾಗಿ, ಗೃಹಿಣಿಯಾಗಿ, ವೈದ್ಯೆ, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ‘ಸ್ತ್ರೀ ಎಂದರೆ..? ಎಂಬ ಸ್ತಬ್ಧಚಿತ್ರದ ಮೂಲಕ ಮನೋಜ್ಞವಾಗಿ ಪರಿಚಯಿಸಿದರು. ಸ್ತ್ರೀ ಸಬಲೀಕರಣ, ಮತ್ತೆ ಅರಳಿದ ಕಾನನ, ಸಮಾಜದಲ್ಲಿ ಹೆಣ್ಣಿನ ಪಾತ್ರಗಳನ್ನು ಪರಿಚಯಿಸುವ 3 ಸ್ತಬ್ಧಚಿತ್ರಗಳು ಬೆಸೂರು ಶಾಲೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಅರ್ಕನಹಳ್ಳಿ ಸೆಂಟ್ ಆನ್ಸ್ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ದಿಗ್ಗಜರ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ ವೀರಶೈವ ಸಮಾಜದಿಂದಲೂ ಸ್ತಬ್ಧಚಿತ್ರವನ್ನು ಮೆರವಣಿಯಲ್ಲಿ ಅಳವಡಿಸಲಾಗಿತ್ತು.

ಗಣಪತಿ ದೇವಾಲಯದಿಂದ ಹೊರಟ ಮೆರವಣಿಗೆ 2 ಕಿ.ಮೀ.ವರೆಗೆ ಸಾಗಿತು. ಸುಮಾರು 100 ಮೀಟರ್ ಉದ್ದವಿದ್ದ ಕನ್ನಡ ಧ್ವಜವನ್ನು ವಿದ್ಯಾರ್ಥಿಗಳು ಹಿಡಿದು ಸಾಗಿದರು. ದಾರಿಯುದ್ದಕ್ಕೂ ಕನ್ನಡಾಭಿಮಾನಿಗಳು ಮೆರವಣಿಗೆಯನ್ನು ವೀಕ್ಷಿಸಿದರು. ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದಾಹ ನೀಗಿಸಲು ಮಜ್ಜಿಗೆ ವಿತರಿಸಿದರು.

ಕನ್ನಡಮಯದೊಂದಿಗೆ ಅಭೂತ ಪೂರ್ವವಾಗಿ ನಡೆದ ಮೆರವಣಿಗೆ ಯನ್ನು ಮಂಗಳವಾದ್ಯ, ಪೂರ್ಣ ಕುಂಭ, ಗೊಂಬೆ ಕುಣಿತ ತಂಡಗಳು ಮುನ್ನಡೆಸಿದರೆ, ಕೊಡ್ಲಿಪೇಟೆ ಭಾಗದ ವಿವಿಧ ಶಾಲಾ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಆಟೋ ಚಾಲಕರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿ ಗಳು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಕನ್ನಡಾಭಿಮಾನಿ ಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿ ದ್ದರು. ಅಚ್ಚುಕಟ್ಟು ಮತ್ತು ಆಕರ್ಷಕವಾಗಿದ್ದ ಮೆರವಣಿಗೆಯನ್ನು ದೊಡ್ಡಕೊಡ್ಲಿ ಸಹಿಪ್ರಾ ಶಾಲೆಯ ವಿದ್ಯಾರ್ಥಿನಿ ಅಕ್ಷತಾ ಉದ್ಘಾಟಿಸಿದರು. ಮೆರವಣಿಗೆ ಯಶಸ್ವಿಯಾಗಿ ನೆರವೇರಲು ಮೆರವಣಿಗೆ ಸಮಿತಿಯ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ಸಂಚಾಲಕರಾದ ಹೊನ್ನಮ್ಮ ಅವರು ಗಳೊಂದಿಗೆ ಸಮಿತಿ ಸದಸ್ಯರು ಶ್ರಮ ವಹಿಸಿದ್ದರು. ಮೆರವಣಿಗೆ ಎಸ್‍ಜಿಎಸ್ ಶಾಲಾ ಆವರಣಕ್ಕೆ ಆಗಮಿಸಿದ ಸಂದರ್ಭ ಗೊಂಬೆ ವೇಷಧಾರಿ ಗಳೊಂದಿಗೆ ನೂರಾರು ಮಕ್ಕಳು ಕುಣಿದು ಕುಪ್ಪಳಿಸಿ, ಸಂಭ್ರಮದಲ್ಲಿ ಮಿಂದೆದ್ದರು.

- ವಿಜಯ್ ಹಾನಗಲ್, ಸಹಕಾರ: ನರೇಶ್