ಗೋಣಿಕೊಪ್ಪ ವರದಿ, ಡಿ. 7: ದಕ್ಷಿಣ ಕೊಡಗಿನಲ್ಲಿ ವೈದ್ಯಕೀಯ ಸೇವೆಯಲ್ಲಿ ನಿರಂತರ ಸೇವೆ ನೀಡುತ್ತಿರುವ ಮೂವರು ವೈದ್ಯರುಗಳನ್ನು ಗೋಣಿಕೊಪ್ಪ ಲಯನ್ಸ್ ಕ್ಲಬ್ ಹಾಗೂ ಬೆಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಕ್ಲಬ್ ಸಭಾಂಗಣದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಡಾ. ಕಾಳಿಮಾಡ ಶಿವಪ್ಪ, ಡಾ. ಗ್ರೀಷ್ಮಾ ದೇಚಮ್ಮ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಮರಣ್ ಶುಭಾಷ್, ಬೆಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ದೇಚಮ್ಮ, ಪ್ರಮುಖರುಗಳಾದ ಕೃಷ್ಣಮೂರ್ತಿ, ಚೆಪ್ಪುಡೀರ ಮುತ್ತಣ್ಣ ಹಾಗೂ ಸದಸ್ಯರು ಇದ್ದರು.