*ಗೋಣಿಕೊಪ್ಪಲು, ಡಿ. 7 : ಅರವತ್ತೋಕ್ಲು ಮೈಸೂರಮ್ಮ ನಗರದ ಶ್ರೀ ಆಶೀರ್ವಾದ್ ಮುತ್ತಪ್ಪ ದೇವಸ್ಥಾನದ ವತಿಯಿಂದ ತಾ.8 ರಂದು (ಇಂದು) 6 ನೇ ವರ್ಷದ ಪುತ್ತರಿ ವೆಳ್ಳಾಟಂ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಸುರೇಶ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 8 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ ಮಾಡುವ ಮೂಲಕ ಪುತ್ತರಿ ವೆಳ್ಳಾಟಂಗೆ ಚಾಲನೆ ನೀಡಲಾಗುವದು. ಸಂಜೆ 4.30 ಕ್ಕೆ ಮಲೆ ಇಳಿಸುವದು, ಸಂಜೆ 7 ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ. 9 ಗಂಟೆಗೆ ಸರ್ವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.