ಸಿದ್ದಾಪುರ, ಡಿ. 8: ಸಿದ್ದಾಪುರ ಬಸ್ಸು ತಂಗುದಾಣದ ಶೌಚಾಲಯವನ್ನು ಮುಚ್ಚಿ ಅಂಗಡಿ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದ್ದ ಗ್ರಾ.ಪಂ ಯ ಕಾಮಗಾರಿಯನ್ನು ಸ್ಥಗಿತಗೊಳಿಸಲು ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಸಿದ್ದಾಪುರ ಪಂಚಾಯಿತಿಗೆ ತೀವ್ರ ಮುಖಭಂಗವಾಗಿದೆ. ಸಿದ್ದಾಪುರ ಬಸ್ಸು ನಿಲ್ದಾಣದಲ್ಲಿರುವ ಬಸ್ಸು ತಂಗುದಾಣವನ್ನು ಮುಚ್ಚಿ ಮಳಿಗೆ ನಿರ್ಮಾಣ ಮಾಡಲು ಗ್ರಾ.ಪಂ ಯು ಮುಂದಾಗಿತ್ತು. ಈ ಕಾಮಗಾರಿಗೆ ಸಾರ್ವಜನಿಕರು ತಡೆಯೊಡ್ಡಿದ್ದರು. ನಂತರ ಸಿ.ಪಿ.ಐ(ಎಂ) ಪಕ್ಷದ ಮುಖಂಡ ಹೆಚ್.ಬಿ ರಮೇಶ್ ಹಾಗೂ ಇತರರು ಪಂಚಾಯಿತಿಯ ತಂಗುದಾಣವನ್ನು ಮುಚ್ಚಿರುವ ಕ್ರಮವನ್ನು ವಿರೋಧಿಸಿ ವೀರಾಜಪೇಟೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಇದೀಗ ನ್ಯಾಯಾಲಯವು ಬಸ್ಸು ತಂಗುದಾಣದ ಶೌಚಾಲಯವನ್ನು ಮುಚ್ಚದಂತೆ ಹಾಗೂ ಕಾಮಗಾರಿ ನಡೆಸದಂತೆ ತಡೆಯಾಜ್ಞೆಯನ್ನು ನೀಡಿದೆ.
ಸಿದ್ದಾಪುರ ಬಸ್ಸು ನಿಲ್ದಾಣದಲ್ಲಿರುವ ಏಕೈಕ ಸಾರ್ವಜನಿಕ ಬಸ್ಸು ತಂಗುದಾಣದ ಶೌಚಾಲಯವನ್ನು ಮುಚ್ಚಿ ಅಂಗಡಿ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದ್ದ ಪಂಚಾಯಿತಿಯ ಆಡಳಿತ ಮಂಡಳಿಗೆ ಇದೀಗ ಹಿನ್ನಡೆಯಾಗಿದೆ.