ಮಡಿಕೇರಿ, ಡಿ. 8: ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಮೈಸೂರು ವತಿಯಿಂದ ಕೊಡಗು ಜಿಲೆಯ 31 ಸ್ಥಳಗಳಲ್ಲಿ ಚಿಲ್ಲರೆ ಮಾರಾಟದ ವಿತರಕರ ನೇಮಕಾತಿ ಮಾಡಲಿದ್ದಾರೆ. ಕೊಡಗು ಜಿಲ್ಲೆಯ 31 ಸ್ಥಳಗಳಲ್ಲಿ ಚಿಲ್ಲರೆ ಮಾರಾಟದ ವಿತರಕರಾಗಿ ನೇಮಕಗೊಳ್ಳಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ತಿತಿತಿ.ಠಿeಣಡಿoಟಠಿumಠಿಜeಚಿಟಚಿಡಿಛಿhಚಿಥಿಚಿಟಿ.iಟಿ ಈ ವೆಬ್‍ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪ್ರೋತ್ಸಾಹ ಧನಕ್ಕೆ
ಪ್ರಸಕ್ತ (2018-19) ಸಾಲಿಗೆ ಬೇರೆ ಬೇರೆ (ಐಐಎಂ, ಐಐಟಿ, ಎನ್‍ಐಟಿ, ಐಐಎಎಸ್‍ಆರ್, ಎಐಐಎಂಎಸ್ ಇತರ) ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ), ಹಾಗೂ 3(ಬಿ) ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ತಾ. 10 ಕೊನೆ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‍ಸೈಟ್ bಛಿತಿಜ.ಣಡಿಚಿiಟಿiಟಿg@ಞಚಿಡಿಟಿಚಿಣಚಿಞಚಿ.gov.iಟಿ ನ್ನು ನೋಡಬಹುದು ಹಾಗೂ ದೂ.: 8050770004 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ವೈಯಕ್ತಿಕ ಯುವ ಪ್ರಶಸ್ತಿಗೆ
2017-18ನೇ ಸಾಲಿನ ಜಿಲ್ಲೆಯ ಒಂದು ಸಾಧಕ ಯುವಕ ಸಂಘ, ಒಂದು ಯುವತಿ ಮಂಡಳಿ ಹಾಗೂ ಯುವತಿ ಮಂಡಳಿ/ಯುವಕ ಸಂಘದ ಪ್ರತಿಭಾವಾನ್ವಿತ 5 ಮಂದಿಗೆ ವೈಯಕ್ತಿಕ ಯುವ ಪ್ರಶಸ್ತಿಯನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವವರು ಯುವಜನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆ ಅರಣ್ಯೀಕರಣ, ಗ್ರಾಮ ನೈರ್ಮಲೀಕರಣ, ಕೊಳಚೆ ನಿರ್ಮೂಲನೆ, ಶ್ರಮದಾನ, ಸಾಮೂಹಿಕ ವಿವಾಹ, ಆಟದ ಬಯಲುಗಳ ಅಭಿವೃದ್ಧಿ, ಕ್ರೀಡಾ ತರಬೇತಿ, ಕ್ರೀಡಾಸಕ್ತಿ ಮೂಡಿಸುವದು. ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆ/ ಮನರಂಜನೆ/ ಜನಪದ ಕಲೆಗಳನ್ನು ಜನಪ್ರಿಯಗೊಳಿಸುವಲ್ಲಿ ಕಾರ್ಯಕ್ರಮ ಆಯೋಜನೆ ಕಲೆ ಮತ್ತು ಸಾಂಸ್ಕøತಿಕ ಚಟುವಟಿಕೆಯನ್ನು ನಡೆಸುವದು, ವಯಸ್ಕರ ಶಿಕ್ಷಣ, ಶಾಲೆ ಬಿಟ್ಟಿರುವ ಬಾಲಕ ಬಾಲಕಿಯರನ್ನು ಶಾಲೆಗೆ ಸೇರಿಸುವದು. ಆರೋಗ್ಯ ಕಾರ್ಯಕ್ರಮ ಮತ್ತು ಶಿಬಿರಗಳನ್ನು ನಡೆಸಿರುವದು. ಹಳ್ಳಿಯ ಜನರಿಗೆ ಸರ್ಕಾರದ ನೆರವಿನ ಬಗ್ಗೆ ತಿಳುವಳಿಕೆ ಮೂಡಿಸುವದು. ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳ ಆಯೋಜನೆ. ವ್ಯಕ್ತಿತ್ವ ವಿಕಸನ/ ಯುವ ಮುಂದಾಳತ್ವ ತರಬೇತಿ ಶಿಬಿರಗಳನ್ನು ಆಯೋಜಿಸುವದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವದು, ಮುಂತಾದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಸೇವೆಗಳಾದ ಕ್ರೀಡೆ, ಯುವಜನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವದು. ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡ ಒಂದು ಯುವಕ ಸಂಘ, ಒಂದು ಯುವತಿ ಮಂಡಳಿ ಐದು ವೈಯಕ್ತಿಕ ಯುವ ಪ್ರಶಸ್ತಿಗಳನ್ನು ನೀಡಲಾಗುವದು. ಪ್ರಶಸ್ತಿಗೆ 2017-18 ನೇ ಸಾಲಿನ ಸಂಘದ ಸಾಮಾಜಿಕ ಚಟುವಟಿಕೆಗಳನ್ನು ಪರಿಗಣಿಸಲಾಗುವದು. ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, (ಮ್ಯಾನ್ಸ್ ಕಾಂಪೌಂಡ್ ಹತ್ತಿರ) ಕೊಡಗು, ಮಡಿಕೇರಿ ಇವರಿಂದ ಕಚೇರಿ ಸಮಯದಲ್ಲಿ ಪಡೆದು ಪ್ರಸ್ತಾವನೆಯೊಂದಿಗೆ ಅರ್ಜಿ ಸಲ್ಲಿಸಲು ತಾ. 18 ಕೊನೆ ದಿನವಾಗಿದೆ.
ವೈಯಕ್ತಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ತಮ್ಮ ವಯಸ್ಸಿನ ದೃಢೀಕರಣ ಪತ್ರ ಸಲ್ಲಿಸಬೇಕು. 15 ರಿಂದ 35 ವರ್ಷದ ಯುವಕ ಯುವತಿಯರು ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಸಂಘವು ಕಡ್ಡಾಯವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿಯಾಗಿರಬೇಕು. ಸಂಘ ಪ್ರಶಸ್ತಿಯು ಪಾರಿತೋಷಕ ಪ್ರಶಂಸನಾ ಪತ್ರ ಮತ್ತು ನಗದು ರೂ. 10 ಸಾವಿರ ಒಳಗೊಂಡಿರುತ್ತದೆ. ವೈಯಕ್ತಿಕ ಯುವ ಪ್ರಶಸ್ತಿಯು ಪ್ರಶಂಸನಾ ಪತ್ರ, ಪಾರಿತೋಷಕ ರೂ. 5 ಸಾವಿರ ನಗದು ಹೊಂದಿರುತ್ತದೆ. ಸಂಘ ಪ್ರಶಸ್ತಿ ಹಾಗೂ ವೈಯಕ್ತಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ತಮ್ಮ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕೆಂದು ಸುಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಮಡಿಕೇರಿ ಕಚೇರಿ ದೂ: 08272-2228985 ನ್ನು ಹಾಗೂ ಪಿ.ಪಿ.ಸುಕುಮಾರ್ ಅಧ್ಯಕ್ಷರು ಮೊ: 9481213920, ಕೆ.ಕೆ. ಗಣೇಶ್, ಕಾರ್ಯದರ್ಶಿ ಮೊ: 9449759029 ಸಂಪರ್ಕಿಸಬಹುದು.
ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಮಡಿಕೇರಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಯ ಮೂಲಕ ಸಹಕಾರ ಸಂಘ-ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾತ್ರ 6 ತಿಂಗಳು /180 ದಿನಗಳ ಅವಧಿಯ ದೂರ ಶಿಕ್ಷಣದ ಮೂಲಕ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ಜನವರಿ ತಿಂಗಳಿನಿಂದ ಪ್ರಾರಂಭಿಸಲಾಗುವದು. ಈ ತರಬೇತಿಯನ್ನು ಪಡೆಯಲಿಚ್ಚಿಸುವ ಅರ್ಹ ಸಿಬ್ಬಂದಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.
ತಾ. 10 ರಿಂದ ಅರ್ಜಿ ವಿತರಿಸಲಾಗುವದು. ಅರ್ಜಿ ಸಲ್ಲಿಸಲು ತಾ. 31 ಕೊನೆಯ ದಿನವಾಗಿದೆ. ದೂರ ಶಿಕ್ಷಣ ಡಿ.ಸಿ.ಎಂ. ತರಬೇತಿಯ ಅರ್ಜಿ ಫಾರಂ ಮತ್ತು ಕೈಪಿಡಿ ಪುಸ್ತಕವನ್ನು ಕೆ.ಐ.ಸಿ.ಎಂ., ಮಡಿಕೇರಿ ತರಬೇತಿ ಸಂಸ್ಥೆ ಹಾಗೂ ಮಡಿಕೇರಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಹಾಸನ ಜಿಲ್ಲಾ ಸಹಕಾರ ಯೂನಿಯನ್‍ಗಳಿಂದ ಪಡೆಯಬಹುದು.
ಅರ್ಜಿ ಮತ್ತು ಕೈಪಿಡಿ ಪುಸ್ತಕದ ಶುಲ್ಕ ರೂ.200ಗಳನ್ನು ನಗದಾಗಿ ಪಾವತಿಸಿ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿ ಪಡೆಯಬಹುದು. ಅಂಚೆಯ ಮೂಲಕ ಅರ್ಜಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ರೂ. 10 ಮೌಲ್ಯದ ಸ್ಟಾಂಪ್ ಅಂಟಿಸಿದ ಸ್ವ-ವಿಳಾಸವಿರುವ 12x10 ಅಳತೆಯ ಲಕೋಟೆಯನ್ನು ರೂ. 200 ಗಳ ಡಿ.ಡಿ/ ಪೋಸ್ಟಲ್ ಆರ್ಡರ್ ಜೊತೆಗೆ ಲಗತ್ತಿಸಿ ಕಳುಹಿಸಿ ಪ್ರಾಂಶುಪಾಲರಿಂದ ಪಡೆಯಬಹುದು. ತಾ. 31 ರೊಳಗೆ ಸಿಬ್ಬಂದಿಗಳು ಅರ್ಜಿಯನ್ನು ಭರ್ತಿ ಮಾಡಿ ಪ್ರಾಂಶುಪಾಲರು, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಅಬ್ಬಿಪಾಲ್ಸ್ ರಸ್ತೆ, ಮುತ್ತಪ್ಪ ದೇವಸ್ಥಾನ ಹತ್ತಿರ, ಮಡಿಕೇರಿ ಇವರಿಗೆ ಸಲ್ಲಿಸುವದು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 08272-228437/9902189872, 9535250704, 9449245024 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಂಶುಪಾಲರು ತಿಳಿಸಿದ್ದಾರೆ.