*ಗೋಣಿಕೊಪ್ಪಲು, ಡಿ. 7 : ಕೊಡಗು ಜಿಲ್ಲಾ ಬ್ರ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭ ತಾ. 9 ರಂದು ಸಂಘದ ಅಧ್ಯಕ್ಷ ಟಿ.ಎಸ್. ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಗೌರವ ಕಾರ್ಯದರ್ಶಿ ಸದಾನಂದ ಪುರೋಹಿತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತಿ ನಾಗೇಶ್ ಕಾಲೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ ನಂತರ 10 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸಂಘದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, 2017-18 ನೇ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ, ಐ.ಸಿ.ಎಸ್. ಸಿ.ಬಿ.ಎಸ್.ಸಿ, ಪಿಯುಸಿ ಮತ್ತು ಡಿಪ್ಲೋಮ ಬಿ.ಇ.ಡಿ, ಎಮ್. ಇ.ಡಿ, ಸ್ನಾತಕೋತರ ಇಂಜಿನಿಯರಿಂಗ್ ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು. ಇದರೊಂದಿಗೆ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಕೋಶಾಧಿಕಾರಿ ಯೋಗೇಶ್ ಪಡಂತಾಯ ಉಪಸ್ಥಿತರಿದ್ದರು.