ಸುಂಟಿಕೊಪ್ಪ, ಡಿ. 7: ಇತ್ತೀಚಿನ ಕೆಲ ವರ್ಷಗಳಿಂದ ಗೌಡ ಜನಾಂಗದ ಮಕ್ಕಳು ಸರಕಾರಿ ಕೆಲಸಕ್ಕೆ ಸೇರುವದು ವಿರಳವಾಗುತ್ತಿರುವದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಬೆಂಗಳೂರು ಬೃಹತ್ ಮಹಾ ನಗರ ಪಾಲಿಕೆಯ ನಿವೃತ ಜಂಟಿ ಆಯುಕ್ತ (ಕೆಎಎಸ್) ಪಾಣತ್ತಲೆ ಪಳಂಗಪ್ಪ ಕಳವಳ ವ್ಯಕ್ತಪಡಿಸಿದರು. ಮಡಿಕೇರಿಯ ಮೇಲಿನ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಕೊಡಗು ಗೌಡ ನಿವೃತ್ತ ನೌಕರರ ಸಂಘದ 16ನೇ ವಾರ್ಷಿಕ ಮಹಾ ಸಭೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗೌಡ ಜನಾಂಗದ ಮಕ್ಕಳು ಉನ್ನತ ಪದÀವಿ ಪಡೆದ ನಂತರ ವಿದೇಶಗಳಿಗೆ ತೆರಳುವದು, ಖಾಸಗಿ ಕಂಪೆನಿಗಳಲ್ಲಿ ಕೆಲಸ ಅರಸಿಕೊಳ್ಳುವದು ಹೆಚ್ಚಾಗಿ ಕಂಡು ಬರುತ್ತಿದೆ. ಕಠಿಣ ಪರಿಶ್ರಮ ಹಠದಿಂದ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಪ್ರಯತ್ನಿ¸ Àದಿರುವದು ಸರಿಯಲ್ಲ ಎಂದು ಹೇಳಿದರು.

ಹಿರಿಯ ನಾಗರಿಕರ ಪರವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯೋಪದ್ಯಾಯ ಮೂಟೇರ ನಂಜುಂಡ ಅವರು ಮಾತನಾಡಿ, ಯಾವದೇ ವೃತಿಯನ್ನಾಗಲಿ ಶ್ರದ್ಧೆ ನಿಷ್ಟೆಯಿಂದ ನಿರ್ವಹಿಸಿದರೆ ಆತ್ಮತೃಪ್ತಿ ಸಿಗುತ್ತದೆ. ಊರು ಚೆನ್ನಾಗಿರಬೇಕಾದರೆ ಆ ಊರಿನಲ್ಲಿರುವ ಶಿಕ್ಷಕರ ಕರ್ತವ್ಯ ನಿಷ್ಟೆ ಮುಖ್ಯವಾದುದು. ಸಮಾಜಕ್ಕೆ ತನ್ನಿಂದ ಆಗುವ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೋರನ ಸಿ. ವಿಶ್ವನಾಥ್ ಜನಾಂಗದ ಬಡ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಾ ದಾನಿಗಳ ನೆರವಿನಿಂದ ಸಮಾಜ ಬಾಂಧವರ ಅಭಿವೃದ್ಧಿಗೆ ಸಂಘ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ ಎಂದು ಹೇಳಿದರು. ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಹಿರಿಯರಾದ ಪಾಣತ್ತಲೆ ಪಳಂಗಪ್ಪ, ಮೂಟೇರ ನಂಜುಂಡ, ಅವರುಗಳನ್ನು ಈ ಸಂದರ್ಭ ಗೌರವಿಸಲಾಯಿತು.

ಸಹಕಾರ್ಯದರ್ಶಿ ಕುದುಪಜೆ ಶಾರದಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಕುದ್ಪಜೆ ಬೋಜಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ ಸಂಘದ ವರದಿ ವಾಚಿಸಿದರು. ತಳೂರು ಎ. ಕಾಳಪ್ಪ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪೊನ್ನಚನ ಜಿ. ಸೋಮಣ್ಣ ಲೆಕ್ಕ ಪತ್ರ ಮಂಡಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಸೂದನ ಎ. ನಾಣಯ್ಯ, ಪಡಿಕಲ್ ಡಬ್ಲ್ಯೂ. ಚಂಗಪ್ಪ, ಪಾಣತ್ತಲೆ ಸಿ. ಬಿದ್ದಪ್ಪ, ದಂಬೆಕೋಡಿ ಎಸ್. ಆನಂದ, ಪಟ್ಟಡ ಸಿ. ದೇವಯ್ಯ, ಪರಿವಾರ ಎ. ಅಪ್ಪಾಜಿ, ಕುಮಾರಿ ಸೂದನ ಎ. ಮೋಹಿನಿ, ಕುಯ್ಯಮುಡಿ ಕೆ. ವಸಂತ, ಚೆರಿಯಮನೆ ಪ್ರಮೋದ್, ಹೊಸೊಕ್ಲು ಟಿ. ಪೊನ್ನಪ್ಪ, ಉಪಸ್ಥಿತರಿದ್ದರು.