ವೀರಾಜಪೇಟೆ, ಡಿ. 6: ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಕೊನೆಯ ಕಾರ್ತಿಕ ಸೋಮವಾರದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ಏರ್ಪಡಿಸಲಾಗಿತ್ತು.

ರಾತ್ರಿ 7.30ಕ್ಕೆ ಬಸವೇಶ್ವರ ದೇವರಿಗೆ ದೀಪಾರಾಧನೆ, ಅಭಿಷೇಕ ಮಹಾಪೂಜಾ ಸೇವಾ ನಡೆಯಿತು. ಕಾರ್ತಿಕ ಸೋಮವಾರದ ಅಂಗವಾಗಿ ರಾತ್ರಿ 8 ಗಂಟೆಗೆ ವಿಶೇಷ ಸಿಡಿ ಮದ್ದು ಕಾರ್ಯಕ್ರಮ ಆಯೋಜಿಸಲಾಗಿತ್ತು. ವೀರಾಜಪೇಟೆ ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದ್ದರು.