ಸಿದ್ದಾಪುರ, ಡಿ. 6: ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಮಾಸಿಕ ಒಂದು ರೂಪಾಯಿಗೆ ಒಂದು ಲಕ್ಷ ಇನ್ಶುರೆನ್ಸ್ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾವೇರಿ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದರು.
ಸಿದ್ದಾಪುರದ ಕಾವೇರಿ ಗ್ರಾಮೀಣ ಬ್ಯಾಂಕಿನ ಮುಂಭಾಗದಲ್ಲಿ ನಡೆದ ಆರ್ಥಿಕ ಸಾಕ್ಷಾರತ ಜಾಗೃತಿ ಕಾರ್ಯಕ್ರಮ ಹಾಗೂ ಡಿಜಿಟಲ್ ಇಂಡಿಯಾದ ಬಗ್ಗೆ ಉಪಯೋಗ ಹಾಗೂ ಪ್ರಧಾನಮಂತ್ರಿ ಹಾಗೂ ಜೀವನ್ ಜ್ಯೋತಿ ಯೋಜನೆಯ ಅಟಲ್ ಪಿಂಚಣಿ ಯೋಜನೆಯ ಹಾಗೂ ಇತರ ಬ್ಯಾಂಕಿನ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಹಾಗೂ ಜೀವನ್ ಜ್ಯೋತಿ ಯೋಜನೆಯ ಫಲಾನುಭವಿಯಾದ ಸುನೀತಾ ಟಿ.ಆರ್ ಅವರಿಗೆ ರೂ. 2ಲಕ್ಷದ ಮೊತ್ತದ ಚೆಕ್ಕನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ದಾಪುರ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕಿ ಮುಸೀನಾಬಾನು, ಎಸ್.ಬಿ.ಐ. ಬ್ಯಾಂಕಿನ ಮಹೇಶ್ ಉಪಸ್ಥಿತರಿದ್ದರು.