ಮಡಿಕೇರಿ, ಡಿ. 6: ಕಳೆದ ಮೂರು ವರ್ಷಗಳಿಂದ ಮಡಿಕೇರಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಕಾಸ್ ಜನಸೇವಾ ಟ್ರಸ್ಟ್ನ ಆಶ್ರಮವನ್ನು ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ನೂತನವಾಗಿ ಆರಂಭಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಹೆಚ್.ಕೆ. ರಮೇಶ್ ತಿಳಿಸಿದ್ದಾರೆ.
ವಯೋವೃದ್ಧರಿಗೆ ಮತ್ತು ದುರ್ಬಲರಿಗೆ ಆಶ್ರಯ ನೀಡುವದರೊಂದಿಗೆ ಮಡಿಕೇರಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ವಿಕಾಸ್ ಜನಸೇವಾ ಟ್ರಸ್ಟ್ ತನ್ನ ಸೇವೆಯನ್ನು ವಿಸ್ತರಿಸಿದೆ. ಕೊಡಗನ್ನು ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪ್ರಯತ್ನದಲ್ಲಿ ಕೂಡ ಯಶಸ್ಸನ್ನು ಸಾಧಿಸಿದ್ದು, ಇನ್ನು ಮುಂದೆಯೂ ಟ್ರಸ್ಟ್ನ ಕಾರ್ಯ ಚಟುವಟಿಕೆ ಹೆಚ್ಚಾಗಲಿದೆ ಎಂದು ಹೆಚ್.ಕೆ.ರಮೇಶ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಟ್ರಸ್ಟ್ನ ಸೇವೆಯನ್ನು ಬಯಸುವವರು ಈ ಸಂಖ್ಯೆಯನ್ನು 94831 10528 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಜಿ.ಪಂ. ಸದಸ್ಯೆಗೆ ಸನ್ಮಾನ
ಚೆಟ್ಟಳ್ಳಿ, ಡಿ. 6: ಸಮೀಪದ ಮಸ್ಜಿದ್ ತಖ್ವಾ ಮುಸ್ಲಿಂ ಜಮಾಅತ್ ವತಿಯಿಂದ ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಹಯಾತುಲ್ ಇಸ್ಲಾಂ ಮದರಸದಲ್ಲಿ ನಿರ್ಮಾಣಗೊಂಡಿರುವ ಕಂಪ್ಯೂಟರ್ ಲ್ಯಾಬ್ಗೆ ಚಾಲನೆ ನೀಡಿ ಸುನಿತಾ ಮಂಜುನಾಥ್ ಮಾತನಾಡಿದರು. ಈ ಸಂದರ್ಭ ಮಹಲ್ ಅಧ್ಯಕ್ಷ ಆಲಿ ಉಸ್ತಾದ್, ಕಾರ್ಯದರ್ಶಿ ಗಫೂರ್ ಸಾಹೇಬ್, ಗ್ರಾ.ಪಂ. ಸದಸ್ಯರಾದ ಮೊಹಮ್ಮದ್ ರಫಿ, ಆಲಿ, ರಜಾಕ್ ಮತ್ತಿತರರು ಇದ್ದರು.