ವೀರಾಜಪೇಟೆ, ಡಿ. 6: ನವಜ್ಯೋತಿ ಯುವಕ ಸಂಘದ 29 ನೇ ವಾರ್ಷಿಕೊತ್ಸವದ ಅಂಗವಾಗಿ ಪುರುಷರ ಮೂರನೇ ವರ್ಷದ ಜಿಲ್ಲಾ ಮಟ್ಟದ ಟ್ಯೆಗರ್ ಫ್ಯೆವ್ ಕಾಲ್ಚೆಂಡು ಪಂದ್ಯಾಟವನ್ನು ತಾ. 15 ಮತ್ತು 16 ರಂದು ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜನಾರ್ಧನ ಮೂರ್ತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಹಲವು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಯುವಕರ ಪಂದ್ಯಾಟವನ್ನು ಆಯೋಜಿಸಿಕೊಂಡು ಬರುತ್ತಿದೆ. ಹಲವಾರು ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಕಾಲ್ಚೆಂಡು ಪಂದ್ಯಾಟ ಸಹಕಾರಿಯಾಗುತ್ತದೆ ಎಂದು ಹೇಳಿದರು. ಕಾರ್ಯದರ್ಶಿ ರವಿ ಮಾತನಾಡಿ, ಪಂದ್ಯಾಟದಲ್ಲಿ ಭಾಗವಹಿಸುವ ಮತ್ತು ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಹಣ ನೀಡಲಾಗುವದು. 20 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಖಜಾಂಚಿ ಕೆ.ಎನ್. ಸುನಿಲ್, ನಿರ್ದೇಶಕ ಜೋಡಿವಾಜ್ ಉಪಸ್ಥಿತರಿದ್ದರು.